ಬಾಬಾ ರಾಮ್‌ದೇವ್
ದೇಶ
ನಿರುದ್ಯೋಗ ಸಮಸ್ಯೆ ಪರಿಹರಿಸಲು ಕೇಂದ್ರ, ರಾಜ್ಯ ಸರ್ಕಾರಗಳ ನಿರುತ್ಸಾಹ: ಬಾಬಾ ರಾಮ್‌ದೇವ್
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕರಾದ ವಿರುದ್ಧ ಯೋಗಗರು ಬಾಬಾ ರಾಮ್‌ದೇವ್ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ...
ಭೋಪಾಲ್: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕರಾದ ವಿರುದ್ಧ ಯೋಗಗರು ಬಾಬಾ ರಾಮ್‌ದೇವ್ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ನಿರುದ್ಯೋಗ ದೇಶದ ಬಹುದೊಡ್ಡ ಸಮಸ್ಯೆಯಾಗಿದ್ದು ಇದನ್ನು ಪರಿಹರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚಿನ ಶ್ರಮವಹಿಸಿಲ್ಲ ಎಂದು ಬಾಬಾ ರಾಮ್‌ದೇವ್ ಹೇಳಿದ್ದಾರೆ.
ಸ್ವದೇಶಿ ಚಳುವಳಿ ಮೂಲಕ ಸ್ವಯಂ ಅವಲಂಬಿತ ದೇಶವನ್ನು ಕಟ್ಟಲು ನಿರ್ಧರಿಸಿದ್ದೇನೆ. ಇನ್ನು ನಿರುದ್ಯೋಗ, ಬಡತನ, ಹಸಿವು ಮತ್ತು ಆಹಾರ ಕೊರತೆ ಭಾರತಕ್ಕೆ ಅಪಮಾನದಂತಿದ್ದು ಇದನ್ನು ತೊಡೆದು ಹಾಕುವುದೇ ನಮ್ಮ ಗುರಿ ಎಂದು ಹೇಳಿದ್ದಾರೆ.
ಕಳೆದ ಒಂದು ತಿಂಗಳಿನಲ್ಲಿ ಪತಾಂಜಳಿ ಸಮೂಹ ಸುಮಾರು 11 ಸಾವಿರ ಉದ್ಯೋಗಗಳನ್ನು ಸೃಷ್ಟಿಸಿದೆ. ಇನ್ನು ಮುಂದಿನ ಐದಾರು ತಿಂಗಳಲ್ಲಿ ಇದೇ ರೀತಿಯ ಉದ್ಯೋಗಗಳನ್ನು ಸೃಷ್ಟಿಸಲಾಗುವುದು. ಮುಂದಿನ ಆರು ತಿಂಗಳಲ್ಲಿ ಮಧ್ಯಪ್ರದೇಶದಲ್ಲಿ 20 ಸಾವಿರ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಿದೆ ಎಂದರು.

