ನವದೆಹಲಿ: ಪ್ರತಿಯೋರ್ವ ಭಾರತೀಯನಿಗೂ ತಿಳಿಯುವ ಹಕ್ಕಿದೆ ಮತ್ತು ಅದನ್ನು ಸರಕಾರ ನಿರಾಕರಿಸುವಂತಿಲ್ಲ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಮಾಹಿತಿ ಹಕ್ಕು ಕಾಯಿದೆಗೆ ಸರಕಾರ ತರಲು ಬಯಸಿರುವ ತಿದ್ದುಪಡಿಯನ್ನು ವಿರೋಧಿಸಿರುವ ರಾಹುಲ್ ಗಾಂಧಿ ಕೇಂದ್ರ ಸರ್ಕಾರ ಜನರಿಂದ ಸತ್ಯವನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಪಾರದರ್ಶಕತೆ ಮತ್ತು ಮಾಹಿತಿ ಗಾಗಿರುವ ಮೈಲುಗಲ್ಲು ಕಾನೂನು ಎಂದೇ ತಿಳಿಯಲ್ಪಟ್ಟಿರುವ ಮಾಹಿತಿ ಹಕ್ಕು ಕಾಯಿದೆಗೆ ತಿದ್ದುಪಡಿ ತಂದಲ್ಲಿ ಅದರಿಂದ ಆ ಕಾಯಿದೆಯು ನಿರುಪಯುಕ್ತವಾಗುತ್ತದೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಇದೀಗ ಸಾಗುತ್ತಿರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಮಾಹಿತಿ ಹಕ್ಕು ವಿವಾದಾತ್ಮಕ ತಿದ್ದುಪಡಿ ಮಸೂದೆಯನ್ನು ಮಂಡಿಸಲಿದೆ ಮತ್ತು ಅದಕ್ಕೆ ಮೊದಲೇ ರಾಹುಲ್ ಈ ತಿದ್ದುಪಡಿಗಿರುವ ತಮ್ಮ ವಿರೋಧವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತಪಡಿಸಿದ್ದಾರೆ.