ಬಾಬರಿ ಮಸೀದಿ ದ್ವಂಸದ ವೇಳೆ ಹಿಂದೂಗಳು ತಾಲಿಬಾನಿಗಳಂತೆ ವರ್ತಿಸಿದ್ದರು: ವಕೀಲ ರಾಜೀವ್ ಧವನ್

ಬಾಬರಿ ಮಸೀದಿ ದ್ವಂಸವಾಗಿದ್ದ ಡಿಸೆಂಬರ್ 6, 1992 ರಂದು "ಹಿಂದೂಗಳು ತಾಲಿಬಾನಿಗಳಂತೆ" ವರ್ತಿಸಿದ್ದರು ಎಂದು ಅಯೋಧ್ಯೆ ವಿವಾದ ಪ್ರಕರಣದಲ್ಲಿ ಮುಸ್ಲಿಮ್ ಪಕ್ಷದ ಪರ ವಕೀಲರಾದ ರಾಜೀವ್ ಧವನ್ ಹೇಳಿದ್ದಾರೆ.
ಅಯೋಧ್ಯೆ - ಸಂಗ್ರಹ ಚಿತ್ರ
ಅಯೋಧ್ಯೆ - ಸಂಗ್ರಹ ಚಿತ್ರ
ನವದೆಹಲಿ: ಬಾಬರಿ ಮಸೀದಿ ದ್ವಂಸವಾಗಿದ್ದ ಡಿಸೆಂಬರ್ 6, 1992 ರಂದು "ಹಿಂದೂಗಳು ತಾಲಿಬಾನಿಗಳಂತೆ" ವರ್ತಿಸಿದ್ದರು ಎಂದು ಅಯೋಧ್ಯೆ ವಿವಾದ ಪ್ರಕರಣದಲ್ಲಿ ಮುಸ್ಲಿಮ್ ಪಕ್ಷದ ಪರ ವಕೀಲರಾದ ರಾಜೀವ್ ಧವನ್ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ನಲ್ಲಿ ಅಯೋಧ್ಯೆ ಪ್ರಕರಣ ವಿಚಾರಣೆ ನಡೆಯುತ್ತಿದ್ದ ವೇಳೆ ವಕೀಲರು ಈ ಹೇಳಿಕೆ ನಿಡಿದ್ದಾರೆ. "ಹಿಂದೂಗಳು ಅಂದು ತಾಲಿಬಾನಿಗಳ್ಂತೆ ವರ್ತಿಸಿದ್ದರು. ಡಿಸೆಂಬರ್ 6ರಂದು ಹಿಂದೂಗಳು ನಡೆಸಿದುದು ಒಂದು ಭಯೋತ್ಪಾದನೆ ಕೃತ್ಯವೇ ಹೊರತು ಬೇರಲ್ಲ" ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ ಧವನ್ ಅಯೋಧ್ಯೆಯಲ್ಲಿನ ಬಾಬರಿ ಮಸೀದಿ ದ್ವಂಸವನ್ನು ತಾಲಿಬಾನಿಗಳು ಅಫ್ಘಾನಿಸ್ಥಾನದ ಬಮಿಯಾನ್ ಬುದ್ದನ ಪ್ರತಿಮೆಗಳ ದ್ವಂಸಕ್ಕೆ ಹೋಲಿಸಿದ್ದರು. ಅಲ್ಲದೆ ಹಿಂದೂ ತಾಲಿಬಾನಿಗಳು ಬಾಬರಿ ಮಸೀದಿಯನ್ನು ನಾಶ ಮಾಡಿದ್ದಾರೆ ಎಂದು ವಾದಿಸಿದ್ದರು.
ಡಿಸೆಂಬರ್ 1992ರ ಘಟನೆಯು  "ಹಿಂದೂ ಭಯೋತ್ಪಾದನೆ"ಗೆ ಒಂದು ಉದಾಹರಣಯಾಗಲಿದೆ ಎಂದು ಅವರು ಹೇಳಿದ್ದಾರೆ.1526 ರಿಂದ 1992 ರ ಡಿಸೆಂಬರ್ 6 - ಅದನ್ನು ದ್ವಂಸ ಮಾಡುವವರೆಗೂ ಅಲ್ಲಿ ಮಸೀದಿ ಇದ್ದಿತ್ತು ಎಂದು ಅವರು ವಾದಿಸಿದ್ದಾರೆ. ಅಲ್ಲಿ ಇದಕ್ಕೂ ಮುನ್ನ ದೇವಾಲಯವಿತ್ತು ಎಂದು ನಾನು ಭಾವಿಸಲಾರೆ. ಆದರೆ ಹಿಂದೂಗಳಿಗೆ ಅಲ್ಲಿ ಪೂಜೆ ನೆರವೇರಿಸಲು ಅವಕಾಶ ನಿಡಲಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಏತನ್ಮಧ್ಯೆ, ಅಯೋಧ್ಯೆಯ ವಿಷಯವನ್ನು ಸಂವಿಧಾನ  ಪೀಠಕ್ಕೆ ವರ್ಗಾಯಿಸಬೇಕೆ ಅಥವಾ ಬೇಡವೆ ಎನ್ನುವ ಕುರಿತ ತೀರ್ಪನ್ನು ನ್ಯಾಯಾಲಯವು ಕಾಯ್ದಿರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com