
ನವದೆಹಲಿ: ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರಸರ್ಕಾರದ ವಿರುದ್ಧ ಟಿಡಿಪಿ ಮಂಡಿಸಿದ ಅವಿಶ್ವಾಸ ನಿರ್ಣಯ ಕುರಿತು ಲೋಕಸಭೆಯಲ್ಲಿಂದು ಮಾತನಾಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ರಾಫೆಲ್ ನಡಲ್ ವಿಮಾನ ಖರೀದಿ ಒಪ್ಪಂದ , ನಿರುದ್ಯೋಗ , ನೋಟ್ ಅಮಾನ್ಯತೆ, ಮಹಿಳೆಯರ ಅಸುರಕ್ಷತೆ ಸೇರಿದಂತೆ ಹಲವು ವಿಚಾರಗಳ ಕುರಿತಂತೆ ಕೇಂದ್ರಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಮಧ್ಯೆ ಎದ್ದು ಕೇಂದ್ರ ಸಚಿವೆ ನಿಂತ ಹರ್‌ಸಿಮ್ರತ್ ಕೌರ್ ಬಾದಲ್, ಇದು ಸಂಸತ್ , ಮುನ್ನಭಾಯಿ ಸಿನಿಮಾ ಸೆಟ್ ಅಲ್ಲ ಎಂದು ಜೋರು ಧ್ವನಿಯಲ್ಲಿ ರಾಹುಲ್ ಗಾಂಧಿ ಆರೋಪಗಳನ್ನು ಟೀಕಿಸಿದರು.
ಅಲ್ಲದೇ, ಈ ಹಿಂದೆ ರಾಹುಲ್ ಗಾಂಧಿ ಪಂಜಾಬ್ ರಾಜ್ಯದವರು ಯಾವಾಗಲೂ ಮಾದಕ ದ್ರವ್ಯದ ನಶೆಯಲ್ಲಿರುತ್ತಾರೆ ಎಂದು ನೀಡಿದ ಹೇಳಿಕೆ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಹರ್‌ಸಿಮ್ರತ್ ಕೌರ್ ಬಾದಲ್, ಇಂದು ಸದನಕ್ಕೆ ಏನು ತಿಂದು ಬಂದಿದ್ದೀರಿ ಎಂದು ಪ್ರಶ್ನಿಸುವ ಮೂಲಕ ರಾಹುಲ್ ಗಾಂಧಿ ಬಾಯಿ ಕಟ್ಟಿಹಾಕಲು ಪ್ರಯತ್ನಿಸಿದ ಪ್ರಸಂಗವೂ ನಡೆಯಿತು.
ನಂತರ ಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಹರ್‌ಸಿಮ್ರತ್ ಕೌರ್ ಬಾದಲ್ ಅವರನ್ನು ಸಮಾಧಾನಪಡಿಸಿ ರಾಹುಲ್ ಗಾಂಧಿ ಮಾತು ಮುಂದುವರೆಸಲು ಅವಕಾಶ ಮಾಡಿಕೊಟ್ಟರು.
Advertisement