ಸಲೀಂ ಶಾಹ್
ದೇಶ
ಕಾಶ್ಮೀರ: ಉಗ್ರರು ಅಪಹರಿಸಿದ್ದ ಪೊಲೀಸ್ ಪೇದೆಯ ಮೃತದೇಹ ಪತ್ತೆ
ಉಗ್ರರು ಅಪಹರಿಸಿದ್ದ ಜಮ್ಮು ಮತ್ತು ಕಾಶ್ಮೀರದ ಪೋಲೀಸ್ ಪೇದೆಯ ಮೃತದೇಹ ಕುಲ್ಗಾಮ್ ಜಿಲ್ಲೆಯಲ್ಲಿ ಪತ್ತೆಯಾಗಿದೆ...
ಶ್ರೀನಗರ: ಉಗ್ರರು ಅಪಹರಿಸಿದ್ದ ಜಮ್ಮು ಮತ್ತು ಕಾಶ್ಮೀರದ ಪೋಲೀಸ್ ಪೇದೆಯ ಮೃತದೇಹ ಕುಲ್ಗಾಮ್ ಜಿಲ್ಲೆಯಲ್ಲಿ ಪತ್ತೆಯಾಗಿದೆ ಎಂದು ಶನಿವಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರಜೆಯಲ್ಲಿದ್ದ ಪೊಲೀಸ್ ಪೇದೆ ಸಲೀಂ ಶಾಹ್ ನನ್ನು ಕಳೆದ ರಾತ್ರಿ ಅವರ ಕುಲ್ಗಾಮ್ ನ ಮುತಲ್ಹಮಾ ಪ್ರದೇಶಾದಲ್ಲಿರುವ ಮನೆಯಿಂದ ಉಗ್ರರು ಅಪಹರಿಸಿದ್ದರು.
ಅಪಹರಣಗೊಂಡ ಪೊಲೀಸ್ ಪೇದೆಯ ಪತ್ತೆಗೆ ಕಾರ್ಯಚರಣೆ ಆರಂಭಿಸಿದ್ದ ಭದ್ರತಾ ಪಡೆಗಳು ಇಂದು ಸಂಜೆ ಮೃತದೇಹ ಪತ್ತೆ ಹಚ್ಚಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಹಂತಕರಿಗಾಗಿ ಶೋಧಕಾರ್ಯ ಮುಂದುವರೆದಿದೆ ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ