ಎಸ್ಎಂಎಸ್ ಆಫರ್: ಇಂದಿರಾಗಾಂಧಿ ಮುಕ್ತ ವಿವಿ ಅಸೈನ್‌ಮೆಂಟ್‌ ಗಳು ಮಾರಾಟಕ್ಕಿವೆ!

ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾನಿಲಯದ ಆನ್ ಲೈನ್ ಕೋರ್ಸ್ ಗಳ ಅಸೈನ್ ಮೆಂಟ್ ಗಳು ರೂ.99 ಕ್ಕೆ ಮಾರಾಟಕ್ಕಿವೆ! ವಿದ್ಯಾರ್ಥಿಗಳ ಮೆಸೆಂಜರ್ ಖಾತೆಗೆ ಇಂಥಹದ್ದೊಂದು ಮೆಸೇಜ್ ಬರತೊಡಗಿರುವುದು ಆತಂಕ
ಎಸ್ಎಂಎಸ್ ಆಫರ್: ಇಂದಿರಾಗಾಂಧಿ ಮುಕ್ತ ವಿವಿ ಅಸೈನ್‌ಮೆಂಟ್‌ ಗಳು ಮಾರಾಟಕ್ಕಿವೆ!
ಎಸ್ಎಂಎಸ್ ಆಫರ್: ಇಂದಿರಾಗಾಂಧಿ ಮುಕ್ತ ವಿವಿ ಅಸೈನ್‌ಮೆಂಟ್‌ ಗಳು ಮಾರಾಟಕ್ಕಿವೆ!
ಕೊಚ್ಚಿ: ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾನಿಲಯದ ಆನ್ ಲೈನ್ ಕೋರ್ಸ್ ಗಳ ಅಸೈನ್ ಮೆಂಟ್ ಗಳು ರೂ.99 ಕ್ಕೆ ಮಾರಾಟಕ್ಕಿವೆ! ವಿದ್ಯಾರ್ಥಿಗಳ ಮೆಸೆಂಜರ್ ಖಾತೆಗೆ ಇಂಥಹದ್ದೊಂದು ಮೆಸೇಜ್ ಬರತೊಡಗಿರುವುದು ಆತಂಕ, ಅಚ್ಚರಿಗಳನ್ನು ಮೂಡಿಸಿವೆ. 
"ಪ್ರತಿ ವಿಷಯಕ್ಕೂ 99 ರೂಪಾಯಿ ಪಾವತಿ ಮಾಡಿದರೆ ವಿದ್ಯಾರ್ಥಿಗಳ ಅಸೈನ್ ಮೆಂಟ್ ಗಳು ರೆಡಿಯಾಗಿರುತ್ತವೆ. ಅಷ್ಟೇ ಅಲ್ಲದೇ ಈ ಹಿಂದಿನ ವರ್ಷದ ಪ್ರಶ್ನೆಪತ್ರಿಗಳನ್ನೂ ನಿರ್ದಿಷ್ಟ ಶುಲ್ಕ ವಿಧಿಸಿ ಪಡೆಯಬಹುದು" ಎಂಬ ಮೆಸೇಜ್ ಇಂದಿರಾಗಾಂಧಿ ವಿವಿಯಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವೀಣಾ (ಹೆಸರು ಬದಲಾವಣೆ ಮಾಡಲಾಗಿದೆ) ಅವರಿಗೆ ಬಂದಿತ್ತು. ಆದರೆ ಈ ಹಿಂದಿನ ಪ್ರಶ್ನೆಪತ್ರಿಕೆಗಳು ಇಗ್ನೋ ವೆಬ್ ಸೈಟ್ ನಲ್ಲಿಯೇ ಲಭ್ಯವಿದೆ. 
ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ಲಭ್ಯವಾಗಿದ್ದು, ಇಂದಿರಾಗಾಂಧಿ ಮುಕ್ತ ವಿವಿಯ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲಾ ಅಸೈನ್ಮೆಂಟ್ ಗಳೂ ಸಹ ಈ ಜಾಲ ಹೊಂದಿದ್ದು, ವಿದ್ಯಾರ್ಥಿಗಳಿಂದ ಹಣ ಪಡೆಯುವುದಕ್ಕಾಗಿ ಬ್ಯಾಂಕ್ ಹಾಗೂ ಪೇ ಟಿಎಂ ಖಾತೆಗಳನ್ನೂ ಒದಗಿಸಲಿದ್ದಾರೆ ಎಂಬುದು ಬಹಿರಂಗವಾಗಿದೆ. 
ರೂ.99 ಕ್ಕೆ ಪ್ರತಿ ವಿದ್ಯಾರ್ಥಿಗೂ ವಿಭಿನ್ನ ರೀತಿಯಲ್ಲಿ ಅಸೈನ್ ಮೆಂಟ್ ಗಳನ್ನು ಮಾಡಿಕೊಡಲಾಗುತ್ತದೆ ಎಂಬ ಭರವಸೆಯನ್ನೂ ಈ ಜಾಲದ ಸಿಬ್ಬಂದಿ ನೀಡಿದ್ದಾರೆ. "ನನ್ನ ಹಾಗೂ ನನ್ನ ಬ್ಯಾಚ್ ಮೆಟ್ ಗಳ ನಂಬರ್ ಅಸೈನ್ ಮೆಂಟ್ ಮಾರಾಟ ಮಾಡುವ ಜಾಲಕ್ಕೆ ಹೇಗೆ ಸಿಕ್ಕಿರುವುದು ಅಚ್ಚರಿ ಮೂಡಿಸಿದೆ. ಆನ್ ಲೈನ್ ಆಡ್ಮೀಷನ್ ಪ್ರಕ್ರಿಯೆಯ ಭಾಗವಾಗಿ ನಾವು ನಮ್ಮ ಆಧಾರ್ ಕಾರ್ಡ್ ವಿವರ ಹಾಗೂ  ಪ್ರಮಾಣಪತ್ರಗಳನ್ನು ಅಪ್ ಲೋಡ್ ಮಾಡಿರುತ್ತೇವೆ, ಇದು ನಮಗೆ ಆತಂಕ ಮೂಡಿಸುತ್ತಿರುವ ವಿಷಯ ಎಂದು ಹೇಳಿದ್ದಾರೆ.
ಈ ವಿಷಯವಾಗಿ ಎಕ್ಸ್ ಪ್ರೆಸ್ ಇಂದಿರಾಗಾಂಧಿ ಮುಕ್ತ ವಿವಿಯ ಪ್ರಾದೇಶಿಕ ಕೇಂದ್ರವನ್ನು ಸಂಪರ್ಕಿಸಿದ್ದು, ವಿದ್ಯಾರ್ಥಿಗಳಿಂದ ಈ ರೀತಿಯ ದೂರುಗಳು ಬಂದಿಲ್ಲ ಎಂದು ಪ್ರಾದೇಶಿಕ ನಿರ್ದೇಶಕಿ ಸಿಂಧು ಪಿ ನಾಯರ್ ಹೇಳಿದ್ದಾರೆ. ಆದರೆ ಈ ರೀತಿಯ ಜಾಲವೊಂದು ಅಸ್ತಿತ್ವದಲ್ಲಿರುವುದು ಆತಂಕಕಾರಿಯಾಗಿದ್ದು ದೆಹಲಿಯಲ್ಲಿರುವ ಕೇಂದ್ರ ಕಚೇರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇವೆ. ವಿದ್ಯಾರ್ಥಿಗಳಿಗೂ ಸಹ ಈ ರೀತಿಯ ಅಕ್ರಮ ಜಾಲಗಳಿಂದ ಎಚ್ಚರವಾಗಿರುವಂತೆ ಸಲಹೆ ನೀಡುತ್ತೇವೆ ಎಂದು ಸಿಂಧು ನಾಯರ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com