ನವದೆಹಲಿ: ಪ್ರಧಾನಿ ನರೇಂದ್ರಮೋದಿ ಅವರ ಜನಪ್ರಿಯತೆ ಹೆಚ್ಚಿದಂತೆ ಸಾಮೂಹಿಕ ಹಲ್ಲೆ ಕೂಡಾ ಹೆಚ್ಚುತ್ತಿವೆ ಎಂದು ಕೇಂದ್ರ ಸಚಿವ ಅರ್ಜುನ್ ಮೇಘವಾಲ್ ಹೇಳಿದ್ದಾರೆ.
ರಾಜಸ್ತಾನದ ಅಲ್ವಾರ್ ಜಿಲ್ಲೆಯಲ್ಲಿ ಗೋವು ಸಾಗಣೆಯ ಕಳ್ಳನೆಂದು ಅನುಮಾನಿಸಿ ಅಕ್ಬರ್ ಖಾನ್ ಎಂಬವರನ್ನು ಗುಂಪೊಂದು ಹತ್ಯೆಗೈದ ಬಗ್ಗೆ ಮೇಘವಾಲ್, ಈ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಬಿಹಾರ ಚುನಾವಣೆ ಸಂದರ್ಭದಲ್ಲಿ ವಾಪ್ಸಿಯಲ್ಲಿ ಹಾಗೂ ಉತ್ತರ ಪ್ರದೇಶದ ಚುನಾವಣೆಯಲ್ಲಿ ಸಾಮೂಹಿಕ ಹಲ್ಲೆ ನಡೆದಿತ್ತು. 2019 ರ ಚುನಾವಣೆಯಲ್ಲಿಯೂ ಇದು ಸಂಭವಿಸುತ್ತದೆ. ಮೋದಿ ಉತ್ತಮ ನೀತಿಗಳನ್ನು ನೀಡಿದ್ದಾರೆ. ಆದರೆ, ಗುಂಪು ಹತ್ಯೆಯಂತಹ ಘಟನೆಗಳು ಸಂಭವಿಸುತ್ತಿವೆ ಎಂದು ಅವರು ಹೇಳಿದ್ದಾರೆ.
ಇಂತಹ ಸಣ್ಣ ಘಟನೆಯನ್ನೂ ಕೂಡಾ ನಾನು ಖಂಡಿಸುತ್ತೇನೆ. ಇದು ಏಕೆ ಸಂಭವಿಸುತ್ತದೆ. ಇದನ್ನು ಯಾರು ತಡೆಗಟ್ಟುತ್ತಾರೆ. ದೇಶದ ಅತಿದೊಡ್ಡ ಸಾಮೂಹಿಕ ಹಲ್ಲೆಯಾಗಿರುವ 1984ರ ಸಿಖ್ ವಿರೋಧಿ ದಂಗೆಯಲ್ಲಿ ಏನು ಸಂಭವಿಸಿತ್ತು ಎಂದು ಮೇಘವಾಲ್ ಪ್ರಶ್ನಿಸಿದ್ದಾರೆ.