ವಿಶ್ವದ ಎದುರು ದೇಶದ ರಾಜಕಾರಣಿಗಳ ವರ್ಚಸ್ಸಿಗೆ ರಾಹುಲ್ ಗಾಂಧಿ ಧಕ್ಕೆ: ಅರುಣ್ ಜೇಟ್ಲಿ

ರಾಫೆಲ್ ನಡಲ್ ಓಪ್ಪಂದ ಸಂಬಂಧ ಫ್ರೆಂಚ್ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರನ್ ಸಂಭಾಷಣೆ ಪ್ರಸ್ತಾವಿಸುವ ಮೂಲಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿಶ್ವದ ಮುಂದೆ ದೇಶದ ರಾಜಕಾರಣಿಗಳ ವರ್ಚಸ್ಸಿಗೆ ತೀವ್ರ ರೀತಿಯ ಧಕ್ಕೆ ತಂದಿದ್ದಾರೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಆರೋಪಿಸಿದ್ದಾರೆ.
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ

ನವದೆಹಲಿ: ರಾಫೆಲ್ ನಡಲ್ ಓಪ್ಪಂದ ಸಂಬಂಧ ಫ್ರೆಂಚ್ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರನ್ ಸಂಭಾಷಣೆ ಪ್ರಸ್ತಾವಿಸುವ ಮೂಲಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿಶ್ವದ ಮುಂದೆ ದೇಶದ ರಾಜಕಾರಣಿಗಳ ವರ್ಚಸ್ಸಿಗೆ ತೀವ್ರ ರೀತಿಯ ಧಕ್ಕೆ ತಂದಿದ್ದಾರೆ ಎಂದು ವಿತ್ತ ಸಚಿವ ಅರುಣ್  ಜೇಟ್ಲಿ ಆರೋಪಿಸಿದ್ದಾರೆ.

ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಕುರಿತ ಚರ್ಚೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ,  ರಾಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಫ್ರೆಂಚ್ ಸರ್ಕಾರ  ಮಾಹಿತಿ ನೀಡಲು ನಿರಾಕರಿಸುತ್ತಿದೆ ಎಂದು ಹೇಳಿದ್ದರು.

 ಫ್ರೆಂಚ್ ಅಧ್ಯಕ್ಷ ಮ್ಯಾಕ್ರಾನ್ ಅವರೊಂದಿಗಿನ ಒಪ್ಪಂದ ಕುರಿತು ರಾಹುಲ್ ಗಾಂಧಿ ಪ್ರಸ್ತಾಪಿಸಿ ಅವರ ವಿಶ್ವಾಸರ್ಹತೆಯನ್ನು ಕಡಿಮೆ ಮಾಡಲಾಗಿದೆ  ಅಲ್ಲದೇ, ವಿಶ್ವದ ಮುಂದೆ ಭಾರತೀಯ ರಾಜಕಾರಣಿಗಳ ವರ್ಚಸ್ಸಿಗೆ ಧಕ್ಕೆ ತರಲಾಗಿದೆ ಎಂದು ಅವರು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ.

ಸತ್ಯಗಳು ಯಾವಾಗಲೂ ಪವಿತ್ರವಾಗಿರುತ್ತವೆ , ರಾಹುಲ್ ಗಾಂಧಿ ಅವಿಶ್ವಾಸ ನಿರ್ಣಯ ಕುರಿತ ಚರ್ಚೆಯನ್ನು ಕ್ಷುಲಕಗೊಳಿಸಿದ್ದಾರೆ ಎಂದು ಅರುಣ್ ಜೇಟ್ಲಿ ಆರೋಪಿಸಿದ್ದಾರೆ. ಪ್ರಧಾನಿಯಾಗಬೇಕೆಂದು ಬಯಸುವವರು ಭ್ರಮೆ, ಸುಳ್ಳುತನ ಮತ್ತು ಚಮತ್ಕಾರ ಗುಣವನ್ನು  ಎಂದಿಗೂ ಸೇರಿಸಿಕೊಳ್ಳುವುದಿಲ್ಲ  ಎಂದಿದ್ದಾರೆ.

ಚರ್ಚೆಯಲ್ಲಿ ಪ್ರಮುಖವಾಗಿ  ಭಾಗವಹಿಸುವವರು ಸಾಮಾನ್ಯವಾಗಿ ಹಿರಿಯ ರಾಜಕೀಯ ನಾಯಕರಾಗಿದ್ದು, ರಾಜಕೀಯ ಪ್ರವಚನ ಮಟ್ಟವನ್ನು  ಹೆಚ್ಚಿಸುವ ನಿರೀಕ್ಷೆ ಇರುತ್ತದೆ. ಚರ್ಚೆಯಲ್ಲಿ ಪಾಲ್ಗೊಂಡಿದ್ದ ರಾಷ್ಟ್ರೀಯ ಪಕ್ಷದ ಅಧ್ಯಕ್ಷರು  ಪ್ರಧಾನ ಮಂತ್ರಿಯ ಆಕಾಂಕ್ಷೆಗಳನ್ನು ಹೊಂದಿದ್ದರೆ ಪ್ರತಿ ಪದವೂ ಅಮೂಲ್ಯವಾದುದು , ಅವರ ಸತ್ಯಗಳು ವಿಶ್ವಾಸಾರ್ಹತೆಯನ್ನು ತಿಳಿಸಬೇಕು . ರಾಹುಲ್ ಗಾಂಧಿ ಪದೇ ಪದೇ  ಸತ್ಯವನ್ನು ಮರೆಮಾಚುತ್ತಿದ್ದರು.  ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು  ಜೇಟ್ಲಿ ಹೇಳಿದ್ದಾರೆ.

ಕೇಂದ್ರಸರ್ಕಾರದ ವಿರುದ್ಧ ಲೋಕಸಭೆಯಲ್ಲಿ ಮಂಡಿಸಲಾಗಿದ್ದ  ಅವಿಶ್ವಾಸ ನಿರ್ಣಯದ ಪರ 126 ಮತಗಳು ಬಿದ್ದರೆ ವಿರುದ್ಧವಾಗಿ 325 ಮತಗಳು ಚಲಾವಣೆಗೊಂಡಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com