ಲೈಂಗಿಕ ಸಂಗಾತಿ ಆಯ್ಕೆ ಅವರವರ ವೈಯುಕ್ತಿಕ ವಿಷಯ: ರವಿಶಂಕರ್ ಪ್ರಸಾದ್

ಲೈಂಗಿಕ ಸಂಗಾತಿಯ ಆಯ್ಕೆ ಎನ್ನುವುದು ಆಯಾ ವ್ಯಕ್ತಿಯ ವೈಯುಕ್ತಿಯ ವಿಚಾರ. ದೇಶದಲ್ಲಿ ಸಲಿಂಗ ಕಾಮ ಕಾನೂನು ಬಾಹಿರ ಎಂದು ಹೇಳುವ ಸೆಕ್ಷನ್ 377ರ ....
ಕಾನೂನು ಸಚಿವ ರವಿಶಂಕರ್ ಪ್ರಸಾದ್
ಕಾನೂನು ಸಚಿವ ರವಿಶಂಕರ್ ಪ್ರಸಾದ್
Updated on
ನವದೆಹಲಿ: ಲೈಂಗಿಕ ಸಂಗಾತಿಯ ಆಯ್ಕೆ ಎನ್ನುವುದು ಆಯಾ ವ್ಯಕ್ತಿಯ ವೈಯುಕ್ತಿಯ ವಿಚಾರ. ದೇಶದಲ್ಲಿ ಸಲಿಂಗ ಕಾಮ ಕಾನೂನು ಬಾಹಿರ ಎಂದು ಹೇಳುವ ಸೆಕ್ಷನ್ 377ರ ರದ್ದತಿಗೆ ಕೇಂದ್ರ ಸರ್ಕಾರದ ವಿರೋಧವಿಲ್ಲ ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಮಾದ್ಯಮವೊಂದಕ್ಕೆ ನೀಡಿದ್ದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು ಸಾಮಾಜಿಕ ನಿಲುವುಗಳು  ಬದಲಾಸಗುತ್ತಿರುವುದನ್ನು ನಾವಿಂದು ಕಾಣಬಹುದಾಗಿದೆ. ಹೀಗಾಗಿ ನಾವು ಸಹ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಸರ್ಕಾರದ ನಿಲುವಿಗೆ ಸಮರ್ಥನೆ ನಿಡಿದ್ದಾರೆ.
ಲೈಂಗಿಕ ಸಂಗಾತಿಯ ಆಯ್ಕೆಯು ವೈಯುಕ್ತಿಕ ವಿಚಾರವಾಗಿದೆ. ಹೀಗಾಗಿ ಇದನ್ನು ಅಪರಾಧ ಎನ್ನುವುದು ಸರಿಯಲ್ಲ. ಭಾರತ ಒಂದು ಜಾಗತಿಕ ಶಕ್ತಿಯಾಗಿದ್ದು ಆರ್ಥಿಕತೆ ಪ್ರಗತಿಪಥದಲ್ಲಿ ಸಾಗುತ್ತಿದೆ.ಹಾಇಗಾಗಿ ಆರ್ಥಿಕ ಪ್ರಗತಿಯೊಡನೆಯೇ ಸಾಮಾಜಿಕ ಪ್ರಗತಿಯ ವೇಗವನ್ನು ಹೆಚ್ಚಿಸಿಕೊಳ್ಳುವುದು ಸಹ ಮುಖ್ಯವಾಗಲಿದೆ. ಸಲಿಂಗ ಕಾಮವನ್ನು ಅಪರಾಧ ವ್ಯಾಪ್ತಿಯಿಂದ ಹೊರಗಿಡುವುದು ಬದಲಾಗುತ್ತಿರುವ ಭಾರತೀಯರ ಮನಸ್ಥಿತಿಯನ್ನು ಸೂಚಿಸಲಿದೆ ಎಂದು ಅವರು ಹೇಳಿದ್ದಾರೆ.
ಇನ್ನು ತ್ರಿವಳಿ ತಲಾಕ್ ಕುರಿತಂತೆ ಮಾತನಾಡಿದ ರವಿಶಂಕರ್ ಪ್ರಸಾದ್ ತ್ರಿವಳಿ ತಲಾಕ್ ಮಸೂದೆ ಮುಸ್ಲಿಮ್ ಮಹಿಳೆಯರ ಹಕ್ಕುಗಳನ್ನು ಗೌರವಿಸುವ ಕ್ರಮ ಎಂದು ಹೇಳಿದರು.
ಗುಂಪಿನ ಹತ್ಯೆ ಸಂಬಂಧ ಮಾತನಾಡಿದ ಸಚಿವರು ಇಂತಹಾ ಹತ್ಯೆಗಳು ಖಂಡನಾರ್ಹ. ಇಂತಹಾ ಘಟನೆಗಳನ್ನು ತಡೆಗಟ್ಟುವ ನಿತ್ಟಿನಲ್ಲಿ ಸುಪ್ರೀಂಕೋರ್ಟ್ ನೀಡಿರುವ ಸಲಹೆ ಸೂಚನೆಗಳನ್ನು ಕೇಂದ್ರ ಸರ್ಕಾರ ಪಾಲಿಸಲಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com