ಅಖಿಲ ಭಾರತೀಯ ಟ್ರೇಡರ್ಸ್ ಒಕ್ಕೂಟದಿಂದ ಆಯೋಜಿಸಲಾಗಿದ್ದ ನ್ಯಾಷನಲ್ ಟ್ರೇಡರ್ಸ್ ಕಾನ್ಕ್ಲೇವ್ ಕಾರ್ಯಕ್ರಮದಲ್ಲಿ ಮಾತನಾಡಿರುವ ರಾಜನಾಥ್ ಸಿಂಗ್, ಕಳೆದ 4 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡಿರುವ ಕ್ರಮಗಳು, ಭಾರತವನ್ನು ವಿಶ್ವದ ಟಾಪ್ ಆರ್ಥಿಕ ರಾಷ್ಟ್ರಗಳ ಪಟ್ಟಿಗೆ ಸೇರಿಸಲಿವೆ ಎಂದು ಹೇಳಿದ್ದಾರೆ.