ಸಾಂವಿಧಾನಿಕ ವಿಷಯಗಳ ಸಿಜೆಐ ವಿಚಾರಣೆ ನೇರ ಪ್ರಸಾರ 'ಟ್ರೈ' ಮಾಡಿ ನೋಡಿ: ಕೇಂದ್ರಕ್ಕೆ 'ಸುಪ್ರೀಂ'

ಮುಖ್ಯ ನ್ಯಾಯಮೂರ್ತಿಗಳು ವಿಚಾರಣೆ ನಡೆಸುವ ಸಾಂವಿಧಾನಿಕ ಕಲಾಪಗಳ ವಿಡಿಯೊ ಚಿತ್ರೀಕರಣ ...
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಮುಖ್ಯ ನ್ಯಾಯಮೂರ್ತಿಗಳು ವಿಚಾರಣೆ ನಡೆಸುವ ಸಾಂವಿಧಾನಿಕ ಕಲಾಪಗಳ ವಿಡಿಯೊ ಚಿತ್ರೀಕರಣ ಮತ್ತು ನೇರ ಪ್ರಸಾರವನ್ನು ಪ್ರಾಯೋಗಿಕ ಮಾದರಿಯಲ್ಲಿ ಮಾಡಬಹುದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದ ನ್ಯಾಯಪೀಠಕ್ಕೆ ಈ ವಿಷಯ ತಿಳಿಸಿದ ಅಟೊರ್ನಿ ಜನರಲ್ ಕೆ ಕೆ ವೇಣುಗೋಪಾಲ್, ನ್ಯಾಯಾಂಗ ಕಲಾಪಗಳ ನೇರ ಪ್ರಸಾರ ಮತ್ತು ವಿಡಿಯೊ ಚಿತ್ರೀಕರಣವನ್ನು ಪ್ರಾಯೋಗಿಕ ಮಾದರಿಯಲ್ಲಿ ಮಾಡಬಹುದು ಎಂದು ಹೇಳಿದರು. ಸರ್ಕಾರಿ ಪರ ವಕೀಲರಿಗೆ ನ್ಯಾಯಾಂಗ ಕಲಾಪದಲ್ಲಿ ಸಹಾಯ ಮಾಡುವಂತೆ ಮುಖ್ಯ ನ್ಯಾಯಮೂರ್ತಿಗಳು ಕಳೆದ ಬಾರಿಯ ವಿಚಾರಣೆಯಲ್ಲಿ ಸೂಚಿಸಿದ್ದರು.

ಪ್ರಾಯೋಗಿಕ ಮಾದರಿಯಲ್ಲಿ ನೇರ ಪ್ರಸಾರದ ಕಾರ್ಯವೈಖರಿಯನ್ನು ವಿಶ್ಲೇಷಣೆ ಮಾಡಿ ನಂತರ ಇನ್ನಷ್ಟು ದಕ್ಷಗೊಳಿಸಬಹುದಾಗಿದೆ ಎಂದು ಅಟೊರ್ನಿ ಜನರಲ್ ವೇಣುಗೋಪಾಲ್ ಹೇಳಿದರು. ನೇರ ಪ್ರಸಾರ ಮತ್ತು ವಿಡಿಯೊ ಚಿತ್ರೀಕರಣ ತಾಂತ್ರಿಕವಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಒಂದರಿಂದ ಮೂರು ತಿಂಗಳವರೆಗೆ ಪ್ರಾಯೋಗಿಕ ಮಾದರಿಯಲ್ಲಿ ಪರಿಶೀಲಿಸಬಹುದು ಎಂದು ಹೇಳಿದರು.

ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಲಿಸಿದ ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ಡಿ ವೈ ಚಂದ್ರಚೂಡ್ ಅವರನ್ನೊಳಗೊಂಡ ನ್ಯಾಯಪೀಠ, ಎಲ್ಲಾ ಕಕ್ಷಿದಾರರಿಗೆ ಸರ್ಕಾರಿ ಪರ ವಕೀಲರಿಗೆ ಸಲಹೆ ನೀಡುವಂತೆ ಸೂಚಿಸಿತ್ತು. ವೇಣುಗೋಪಾಲ್ ಅವರು ಸಲಹೆಗಳನ್ನು ಸಂಗ್ರಹಿಸಿ, ಜೋಡಿಸಿ ಅದನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ನಂತರ ಅದಕ್ಕೆ ಒಪ್ಪಿಗೆ ಸಿಗಲಿದೆ ಎಂದು ನ್ಯಾಯಪೀಠ ಹೇಳಿದೆ.

ಮುಂದಿನ ವಿಚಾರಣೆಯನ್ನು ಈ ತಿಂಗಳ 30ಕ್ಕೆ ನ್ಯಾಯಪೀಠ ನಿಗದಿಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com