ವಾಟ್ಸಾಪ್ ಗ್ರೂಪ್ ನಲ್ಲಿ ಸಂದೇಶ ರವಾನಿಸಿ 5 ತಿಂಗಳಿನಿಂದ ಜೈಲಿನಲ್ಲಿರುವ 'ಡಿಫಾಲ್ಟ್ ಅಡ್ಮಿನ್'

ಬೇರೊಬ್ಬರು ವಾಟ್ಸಾಪ್ ಸಂದೇಶವನ್ನು ಫಾರ್ವರ್ಡ್ ಮಾಡಿರುವುದಕ್ಕೆ ಮಧ್ಯ ಪ್ರದೇಶದ ರಾಜ್ ಗರ್ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭೋಪಾಲ್: ಬೇರೊಬ್ಬರು ವಾಟ್ಸಾಪ್ ಸಂದೇಶವನ್ನು ಫಾರ್ವರ್ಡ್ ಮಾಡಿರುವುದಕ್ಕೆ ಡಿಫಾಲ್ಟ್ ಅಡ್ಮಿನ್ ಆಗಿರುವ ಮಧ್ಯ ಪ್ರದೇಶದ ರಾಜ್ ಗರ್ ಜಿಲ್ಲೆಯಲ್ಲಿ 21 ವರ್ಷದ ಯುವಕ ಕಳೆದ 5 ತಿಂಗಳಿನಿಂದ ಜೈಲಿನಲ್ಲಿದ್ದಾರೆ.

ಆಕ್ಷೇಪಾರ್ಹ ಸಂದೇಶವನ್ನು ಕಳುಹಿಸಿದ ನಂತರ ವಾಟ್ಸಾಪ್ ಗ್ರೂಪ್ ನ ನಿಜವಾದ ಅಡ್ಮಿನಿಸ್ಟ್ರೇಟರ್ ಗ್ರೂಪ್ ಬಿಟ್ಟ ನಂತರ ಈ ಯುವಕನನ್ನು ಡಿಫಾಲ್ಟ್ ಅಡ್ಮಿನ್ ಆಗಿ ಬಿಂಬಿಸಲಾಗಿದೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಆದರೆ ಪೊಲೀಸರು, ತಮಗೆ ಸಿಕ್ಕಿರುವ ಸಾಕ್ಷಿ ಆಧಾರದ ಮೇಲೆ ಕ್ರಮ ತೆಗೆದುಕೊಂಡಿದ್ದೇವೆ ಎನ್ನುತ್ತಾರೆ.

ಪ್ರಕರಣವೇನು?: ಜುನೈದ್ ಖಾನ್ ಎಂಬ ಬಿ ಎಸ್ಸಿ ವಿದ್ಯಾರ್ಥಿ ರಾಜ್ ಗರ್ ನ ಟಲೆನ್ ಪಟ್ಟಣದ ನಿವಾಸಿಯಾಗಿದ್ದು, ಕಳೆದ ಫೆಬ್ರವರಿ 14ರಂದು ಐಟಿ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 124 ಎಯಡಿ ಬಂಧಿತನಾಗಿ ಆತನ ವಿರುದ್ಧ ಕೇಸು ದಾಖಲಿಸಲಾಯಿತು. ಆತ ವಾಟ್ಸಾಪ್ ಗ್ರೂಪ್ ನ ಸದಸ್ಯನಾಗಿದ್ದನು. ಆ ವಾಟ್ಸಾಪ್ ಗ್ರೂಪ್ ನ ಅಡ್ಮಿನ್ ಇರ್ಫಾನ್ ಎಂಬುವವರು ಆಕ್ಷೇಪಾರ್ಹ ಸಂದೇಶವನ್ನು ಫಾರ್ವರ್ಡ್ ಮಾಡಿದ್ದರು. ಇದನ್ನು ವಿರೋಧಿಸಿ ಕೆಲವು ಸ್ಥಳೀಯರು ಟಲೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಇರ್ಫಾನ್ ಮತ್ತು ಅಡ್ಮಿನ್ ವಿರುದ್ಧ ದೂರು ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿ ಜುನೈದ್ ವಾಟ್ಸಾಪ್ ಗ್ರೂಪ್ ನ ಅಡ್ಮಿನ್ ಎಂದು ಬಂಧಿಸಿದರು.

ಆದರೆ ಅವರ ಕುಟುಂಬ ಸದಸ್ಯರು ಹೇಳುವುದೇ ಬೇರೆ. ಜುನೈದ್ ಆ ವಾಟ್ಸಾಪ್ ಗ್ರೂಪ್ ನ ಸದಸ್ಯರಾಗಿದ್ದು ಅಡ್ಮಿನ್ ಅಲ್ಲ. ವಿಷಯ ಬೆಳಕಿಗೆ ಬಂದಾಗ ಜುನೈದ್ ರತ್ನಾಮ್ ನಲ್ಲಿದ್ದರು. ನಂತರ ಅಡ್ಮಿನ್ ಗ್ರೂಪ್ ನ್ನು ಬಿಟ್ಟುಹೋಗಿ ಮತ್ತೊಬ್ಬರನ್ನು ಮೋಸದಿಂದ ಗ್ರೂಪ್ ಅಡ್ಮಿನ್ ಮಾಡಲಾಯಿತು. ಅವರು ಕೂಡ ಬಿಟ್ಟುಬಿಟ್ಟರು. ಜುನೈದ್ ಮೋಸದಿಂದ ಗ್ರೂಪ್ ಅಡ್ಮಿನ್ ಆದನು. ಆ ಸಂದೇಶ ಕಳುಹಿಸುವಾಗ ಜುನೈದ್ ಗ್ರೂಪ್ ಅಡ್ಮಿನ್ ಆಗಿರಲಿಲ್ಲ, ಅವನನ್ನು ಡಿಫಾಲ್ಟ್ ಅಡ್ಮಿನ್ ಮಾಡಲಾಗಿದೆ ಎಂದು ಜುನೈದ್ ಸಂಬಂಧಿ ಫಾರೂಕ್ ಖಾನ್ ಹೇಳುತ್ತಾರೆ.

ಜುನೈದ್ ನನ್ನು ಬಂಧಿಸಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಲಾಯಿತು. ನ್ಯಾಯಾಲಯ ಜಾಮೀನು ನೀಡದ ಕಾರಣ ಜುನೈದ್ ಗೆ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಆತನ ಕುಟುಂಬ ಸದಸ್ಯರು ಹಿರಿಯ ಪೊಲೀಸರನ್ನು ಸಂಪರ್ಕಿಸಿದರು ಮತ್ತು ಸಿಎಚ್ ಸಹಾಯವಾಣಿಯ ಮೊರೆ ಹೋದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಮನವಿಯನ್ನು ಯಾರೂ ಕೇಳುತ್ತಿಲ್ಲ ಎನ್ನುತ್ತಾರೆ ಫಾರೂಕ್.

ಆದರೆ ಪೊಲೀಸರು ಹೇಳುವುದೇ ಬೇರೆ. ಜುನೈದ್ ನನ್ನು ಬಂಧಿಸುವಾಗ ಆತ ಅಡ್ಮಿನ್ ಆಗಿರಲಿಲ್ಲ ಎಂದು ಆತನಾಗಲಿ, ಆತನ ಕುಟುಂಬ ಸದಸ್ಯರಾಗಲಿ ಹೇಳಲಿಲ್ಲ. ಯಾವಾಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತೋ ಆಗ ಆತ ಅಡ್ಮಿನ್ ಆಗಿರಲಿಲ್ಲ ಎಂದರು. ಅವರ ಬಳಿ ಸಾಕ್ಷ್ಯಗಳಿದ್ದರೆ ನ್ಯಾಯಾಲಯಕ್ಕೆ ಹಾಜರುಪಡಿಸಲಿ ಎನ್ನುತ್ತಾರೆ ತನಿಖೆಯ ಮುಖ್ಯಸ್ಥ ಪೊಲೀಸ್ ಅಧಿಕಾರಿ ಯುವರಾಜ್ ಸಿಂಗ್ ಚೌಹಾಣ್.

ರಾಜ್ ಘರ್ ಪೊಲೀಸ್ ಸೂಪರಿಂಟೆಂಡೆಂಟ್ ಸಿಮಲಾ ಪ್ರಸಾದ್ ಕೂಡ ಇದೇ ಮಾತನ್ನು ಹೇಳುತ್ತಾರೆ. ಜುನೈದ್ ಗ್ರೂಪ್ ಅಡ್ಮಿನ್ ಆಗಿರಲಿಲ್ಲ ಎಂದು ಆತನ ಕುಟುಂಬ ಸದಸ್ಯರು ಹೇಳುತ್ತಿಲ್ಲ, ಸಂದೇಶ ಕಳುಹಿಸುವಾಗ ಬೇರೆಯವರು ಕೂಡ ಗ್ರೂಪ್ ಅಡ್ಮಿನ್ ಆಗಿದ್ದರು ಎನ್ನುತ್ತಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com