2014 ನಂತರ ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರ ಠೇವಣಿ ಪ್ರಮಾಣ ಶೇ.80 ರಷ್ಟು ಇಳಿಕೆ: ಪಿಯೂಷ್ ಗೊಯಲ್

ಕಪ್ಪು ಹಣ ಕುರಿತಂತೆ ಹಂಗಾಮಿ ವಿತ್ತ ಸಚಿವ ಪಿಯೂಷ್ ಗೊಯಲ್ ರಾಜ್ಯಸಭೆಯಲ್ಲಿ ಮಾತನಾಡಿದರು.
ಪಿಯೂಷ್ ಗೊಯಲ್
ಪಿಯೂಷ್ ಗೊಯಲ್

ನವದೆಹಲಿ: ಕಪ್ಪು ಹಣ ಕುರಿತಂತೆ ಹಂಗಾಮಿ ವಿತ್ತ ಸಚಿವ ಪಿಯೂಷ್ ಗೊಯಲ್ ರಾಜ್ಯಸಭೆಯಲ್ಲಿ ಮಾತನಾಡಿದರು.

2016-17ರ ಅವಧಿಯಲ್ಲಿ ಭಾರತಕ್ಕೆ ಸಂಬಂಧಿಸಿದಂತೆ  ಒಟ್ಟಾರೇ ಶೇ. 50 ರಷ್ಟು ಕಾನೂನು ಹೊಣೆಗಾರಿಕೆಗಳನ್ನು ಹೆಚ್ಚಿಸಿರುವುದು  ಸ್ವೀಸ್ ಬ್ಯಾಂಕ್ ವಾರ್ಷಿಕ ಅಂಕಿಅಂಶಗಳಿಂದ ತಿಳಿದುಬಂದಿದೆ ಎಂದು ಗೊಯಲ್ ಹೇಳಿದರು.

ಮೋದಿ ಸರ್ಕಾರ 2014ರಲ್ಲಿ ಆಸ್ತಿತ್ವಕ್ಕೆ ಬಂದ ನಂತರ  2014ರಿಂದ 2017ರ ಅವಧಿಯಲ್ಲಿ ಭಾರತೀಯರು  ಸ್ವಿಸ್ ರಾಷ್ಟ್ರೀಯ ಬ್ಯಾಂಕಿನಲ್ಲಿ ಇಟ್ಟಿರುವ  ಠೇವಣಿ ಮೊತ್ತದಲ್ಲಿ  ಶೇ. 80 ರಷ್ಟು ಇಳಿಕೆಯಾಗಿದೆ ಎಂದು ತಿಳಿಸಿದರು.
ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಳೆದ ಸಾಲಿನಲ್ಲಿ  ಭಾರತೀಯರು ಸ್ವೀಸ್ ರಾಷ್ಟ್ರೀಯ ಬ್ಯಾಂಕಿನಲ್ಲಿ ಇಟ್ಟಿರುವ  ಠೇವಣಿ ಮೊತ್ತ ಹಾಗೂ ಸಾಲದ ಪ್ರಮಾಣದಲ್ಲಿ ಶೇ. 34. 5 ರಷ್ಟು ಕಡಿಮೆಯಾಗಿದೆ ಎಂದು  ಬ್ಯಾಂಕ್ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ ಎಂದು ಅವರು ಹೇಳಿದರು.
ಸ್ವಿಟ್ಜರ್ಲ್ಯಾಂಡ್ ನಲ್ಲಿ ಭಾರತೀಯ ನಿವಾಸಿಗಳ ಆಸ್ತಿಗಳ ಬಗ್ಗೆ ಘೋಷಿಸಲ್ಪಟ್ಟಿಲ್ಲ  ಎಂದು ಭಾವಿಸಲಾಗಿದ್ದು, 2016ರ ಸಾಲಿಗೆ ಹೋಲಿಸಿದ್ದರೆ   ಬ್ಯಾಂಕೇತರ ಸಾಲ ಮತ್ತು ಠೇವಣಿಯಲ್ಲಿ  ಶೇ.34. 5 ರಷ್ಟು ಇಳಿದಿದೆ ಎಂದು ಬಿಐಎಸ್ ಮಾಹಿತಿಯಲ್ಲಿ ಹೇಳಲಾಗಿದೆ ಎಂದು ಗೊಯಲ್  ಸದನಕ್ಕೆ ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com