ಪಾಕಿಸ್ತಾನಿ ಎಫೆಕ್ಟ್: ಧ್ವಜವನ್ನು ಬದಲಾವಣೆ ಮಾಡಲು ಮುಂದಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್

ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಸಂಘಟನೆ ತನ್ನಲ್ಲಿ ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ.
ಪಾಕಿಸ್ತಾನಿ ಎಫೆಕ್ಟ್:  ಧ್ವಜವನ್ನು ಬದಲಾವಣೆ ಮಾಡಲು ಮುಂದಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್
ಪಾಕಿಸ್ತಾನಿ ಎಫೆಕ್ಟ್: ಧ್ವಜವನ್ನು ಬದಲಾವಣೆ ಮಾಡಲು ಮುಂದಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್
ತಿರುವನಂತಪುರಂ: ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಸಂಘಟನೆ ತನ್ನಲ್ಲಿ ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ. 
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನ ಧ್ವಜ ಪಾಕಿಸ್ತಾನಿ ಮುಸ್ಲಿಂ ಲೀಗ್ ನ ಧ್ವಜವನ್ನೇ ಹೋಲುತ್ತಿತ್ತು. ಈ ಬಗ್ಗೆ ಉತ್ತರ ಪ್ರದೇಶ ಶಿಯಾ ಸೆಂಟ್ರಲ್ ವಕ್ಫ್ ಬೋರ್ಡ್ ನ ಅಧ್ಯಕ್ಷ ಸಯೀದ್ ವಸೀಂ ರಿಜ್ವಿ ಸುಪ್ರೀಂ ಕೋರ್ಟ್ ಗೆ ಪಿಐಎಲ್ ಸಲ್ಲಿಸಿದ್ದರು.  ಪಾಕಿಸ್ತಾನಿ ಮುಸ್ಲಿಂ ಲೀಗ್ ನ ಧ್ವಜವನ್ನೇ ಹೋಲುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಧ್ವಜದಲ್ಲಿ ಇಸ್ಲಾಂ ಗೆ ಸಂಬಂಧಿಸಿದ್ದೇನೂ ಇಲ್ಲ ಎಂದು ಆರೋಪಿಸಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್ ಕೇಂದ್ರ ಸರ್ಕಾರದ ಅಭಿಪ್ರಾಯ ಕೇಳಿತ್ತು.
ಪಾಕಿಸ್ತಾನಿ ಎಫೆಕ್ಟ್ ನಿಂದಾಗಿ ಎಚ್ಚೆತ್ತುಕೊಂಡಿರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಈಗ ಧ್ವಜ ಬದಲಾವಣೆಗೆ ಮುಂದಾಗಿದೆ ಎನ್ನಲಾಗುತ್ತಿದ್ದು ಮುಸ್ಲಿಂ ಯೂತ್ ಲೀಗ್ ನಾಯಕರು ಪಕ್ಷಕ್ಕೆ ಧ್ವಜ ಬದಲಾವಣೆ ಮಾಡುವಂತೆ ಸಲಹೆ ನೀಡಿದ್ದಾರೆ. ಆದರೆ ಮುಸ್ಲಿಂ ಲೀಗ್ ನ ಕೆಲವು ನಾಯಕರು ಈ ಅಂಶವನ್ನು ತಳ್ಳಿ ಹಾಕಿದ್ದು  ವಸೀಂ ರಿಜ್ವಿ ಅವರ ಆರೋಪವನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಹೇಳಿದ್ದಾರೆ. 
ಆದರೆ ಐಯುಎಂಎಲ್ ನ ಶಾಸಕರೊಬ್ಬರು ಧ್ವಜ ಬದಲಾವಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದು, ಎಂವೈಎಲ್ ನಾಯಕರು ಮೂರು ವಿವಿಧ ವಿನ್ಯಾಸದ ಧ್ವಜವನ್ನು ನೀಡಿದ್ದಾರೆ. ಆದರೆ ಈವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com