ಅಮರನಾಥ ಯಾತ್ರೆ
ಅಮರನಾಥ ಯಾತ್ರೆ

ಜಮ್ಮು-ಕಾಶ್ಮೀರ: ಮಳೆಯಿಂದಾಗಿ ಬಾಲ್ಟಲ್ ಮಾರ್ಗದಲ್ಲಿ ಅಮರನಾಥ ಯಾತ್ರೆ ನಿರ್ಬಂಧ

ತೀವ್ರ ಮಳೆಯ ಕಾರಣ ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಬಾಲ್ಟಲ್ ಮಾರ್ಗದಲ್ಲಿ ಅಮರನಾಥ ಯಾತ್ರೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಬಾಲ್ಟಲ್ ಆಕ್ಸಿಸ್ ನಿಂದ ಹೆಲಿಕಾಪ್ಟರ್ ಸೇವೆಯನ್ನೂ ಕೂಡಾ ಸ್ಥಗಿತಗೊಳಿಸಲಾಗಿದೆ.

ಅನಂತ್ ನಾಗ್ : ತೀವ್ರ ಮಳೆಯ ಕಾರಣ ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಬಾಲ್ಟಲ್ ಮಾರ್ಗದಲ್ಲಿ  ಅಮರನಾಥ ಯಾತ್ರೆ ಪ್ರವೇಶವನ್ನು  ನಿರ್ಬಂಧಿಸಲಾಗಿದೆ. ಬಾಲ್ಟಲ್ ಆಕ್ಸಿಸ್ ನಿಂದ  ಹೆಲಿಕಾಪ್ಟರ್ ಸೇವೆಯನ್ನೂ ಕೂಡಾ  ಸ್ಥಗಿತಗೊಳಿಸಲಾಗಿದೆ.

 ಕಳೆದ ರಾತ್ರಿಯಿಂದ ಧಾರಾಕಾರ ಮಳೆಯಾಗುತ್ತಿದ್ದು, ಈ ಮಾರ್ಗವೆಲ್ಲಾ ಕೆಸರು ತುಂಬಿಕೊಂಡಿದ್ದು ಜಾರುವಂತಾಗಿದೆ. ಕಲ್ಲು ಸಿಡಿತ ಹಾಗೂ ಭೂ ಕುಸಿತದಂತಹ ಘಟನೆಗಳು ಸಂಭವಿಸುವ ಸಾಧ್ಯತೆ ಇದೆ. ಆದಾಗ್ಯೂ, ಪಾಹಲ್ಗಂ ಮಾರ್ಗದ ಕಡೆಯಿಂದ ಯಾತ್ರೆಯನ್ನು ಮುಂದುವರೆಸಲಾಗಿದೆ.
 ಇದೇ ರೀತಿಯ ಮಳೆಯ ಕಾರಣದಿಂದಾಗಿ ಈ ಹಿಂದೆ ಜೂನ್ 30 ರಂದು ಬಾಲ್ಟಲ್ ಹಾಗೂ ಪಾಹಲ್ಗಂ ಮಾರ್ಗದಲ್ಲಿಯೂ  ಅಮರನಾಥ ಯಾತ್ರೆಯನ್ನು ನಿಷೇಧಿಸಲಾಗಿತ್ತು. ಮಳೆಯ ಕಾರಣ ಜೂನ್ 27ರಿಂದ ಬಾಲ್ಟಲ್ ಮಾರ್ಗದಲ್ಲಿ ಯಾತ್ರೆಯನ್ನು ನಿಲ್ಲಿಸಲಾಗಿತ್ತು.
ಅಮರನಾಥ ಯಾತ್ರೆಯ ಯಾತ್ರಾರ್ಥಿಗಳನ್ನೊಳಗೊಂಡ ಮೊದಲ ತಂಡ ಜೂನ್ 27 ರಿಂದ ಪ್ರಯಾಣ ಬೆಳೆಸಿತ್ತು. ಆದರೆ, ಮಳೆಯ ಕಾರಣ ಅಂದೇ ಯಾತ್ರೆ ಸ್ಥಗಿತಗೊಂಡಿತ್ತು.
ಆದಾಗ್ಯೂ, ಯಾತ್ರಾರ್ಥಿಗಳು ಕೆಲಕಾಲ ಯಾತ್ರೆಯನ್ನು ಸ್ಥಗಿತಗೊಳಿಸಿದ್ದರೂ ನಂತರ ಬಾಲ್ಟಲ್ ವಾಯುನೆಲೆಯಿಂದ  ಪ್ರಯಾಣ ಬೆಳೆಸಿದ್ದರು.
ಈ ಮಾರ್ಗದಲ್ಲಿ ಜು.4 ರಂದು ಭೂ ಕುಸಿತ ಸಂಭವಿಸಿ ಐವರು ಯಾತ್ರಾರ್ಥಿಗಳು ಮೃತಪಟ್ಟು, ಮೂವರು ಗಾಯಗೊಂಡಿದ್ದರು.

Related Stories

No stories found.

Advertisement

X
Kannada Prabha
www.kannadaprabha.com