ಲೋಕಪಾಲ್ ನೇಮಕ: ಕೇಂದ್ರದ ಪ್ರತಿಕ್ರಿಯೆ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ

ಲೋಕಪಾಲ್ ಸಮಿತಿ ಸದಸ್ಯರನ್ನು ನೇಮಕ ಮಾಡುವ ವಿಚಾರದಲ್ಲಿ ಕೇಂದ್ರದ ಪ್ರತಿಕ್ರಿಯೆಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ನವದೆಹಲಿ: ಲೋಕಪಾಲ್ ಸಮಿತಿ ಸದಸ್ಯರನ್ನು ನೇಮಕ ಮಾಡುವ ವಿಚಾರದಲ್ಲಿ ಕೇಂದ್ರದ ಪ್ರತಿಕ್ರಿಯೆಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳಾದ ರಂಜನ್ ಗೊಗೊಯ್, ಆರ್ ಬಾನುಮತಿ ಮತ್ತು ನವೀನ್ ಸಿನ್ಹಾ ಅವರನ್ನೊಳಗೊಂಡ ಪೀಠವು ಸಂಬಂಧಿತ ವಿಚಾರದಲ್ಲಿ  ತಾಜಾ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರಕ್ಕೆ ಸೂಚಿಸಿದೆ.
ವಿಚಾರಣೆಯ ವೇಳೆ ಅಟಾರ್ನಿ ಜನರಲ್ ಕೆ. ಕೆ. ವೇಣುಗೋಪಾಲ್ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದು ಲೋಕಪಾಲ್ ಆಯ್ಕೆ ಸಮಿತಿ ಸಭೆಯನ್ನು ನಡೆಸಲಾಗಿದೆ, ಶೋಧನಾ ಸಮಿತಿಯ ಸದಸ್ಯರ ಹೆಸರು ಮಾತ್ರ ಇನ್ನೂ ಅಂತಿಮವಾಗಿಲ್ಲ ಎಂದು ಹೇಳಿದ್ದಾರೆ.
ಕಾನೂನು ನಿಬಂಧನೆಗಳನ್ನುಗಮನದಲ್ಲಿತ್ಟುಕೊಂಡು ಸಮಿತಿಯ ಇನ್ನೊಂದು ಸಭೆಯಲ್ಲಿ ಶೋಧನಾ ಸಮಿತಿಯ ಸದಸ್ಯರ ನೇಮಕ ಮಾಡಲಾಗುತ್ತದೆ. ಇದು ಶೀಘ್ರವಾಗಿ ನಡೆಯಲಿದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಪ್ರತಿವಾದಿ ಎನ್ಜಿಒ ಕಾಮನ್ ಕಾಸ್ ಪರವಾಗಿ ಪ್ರಚಾಂತ್ ಭೂಷಣ್ ಮಾತನಾಡಿ ಮುಂದಿನ ಸಭೆಯ ದಿನಾಂಕವನ್ನು ಕೇಂದ್ರ ಇನ್ನೂ ನಿರ್ದಿಷ್ಟಪಡಿಸಿಲ್ಲ. ಸುಮಾರು ಐದು ವರ್ಷಗಳ ಹಿಂದೆ ಕಾನೂನಿನ ಅಂಗೀಕಾರ ಪಡೆದಿದ್ದರೂ ಲೋಕಪಾಲರನ್ನು ನೇಮಕ ಮಾಡುವುದಕ್ಕೆ ಕೇಂದ್ರ ವಿಳಂಬ ಧೋರಣೆ ಅನುಸರಿಸುತ್ತಿದೆ.ಎಂದು ಆರೊಪಿಸಿದರು.
ಈ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಇಲ್ಲವೇ ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ (ಸುಪ್ರೀಂ ಕೋರ್ಟ್ ಆದೇಶ ಪಾಲನೆ) ತನ್ನ ಅಧಿಕಾರವನ್ನು ಬಳಸಿಕೊಂಡು ಲೋಕಪಾಲರನ್ನು ನೇಮಿಸಲು ನ್ಯಾಯಾಲಯ ಮುಂದಾಗಬೇಕೆಂದು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಪ್ರತಿಕ್ರಿಯೆಯಿಂದ ನ್ಯಾಯಪೀಠ ಅಸಮಾಧಾನಗೊಂಡಿದೆ, ಇನ್ನು ನಾಲ್ಕು ವಾರಗಳಲ್ಲಿ ಅಗತ್ಯವಾದ ವಿವರಗಳನ್ನು ಒಳಗೊಂಡ ಹೊಸ ಅಫಿಡವಿಟ್ ಸಲ್ಲಿಕೆಯಾಗಬೇಕು ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com