ತಿರುವನಂತಪುರ: ಉದಯಕುಮಾರ್ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಪೊಲೀಸರು ತಪ್ಪಿತಸ್ಥರು ಎಂದು ಸಿಬಿಐ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ.
2005ರಲ್ಲಿ ಕಳ್ಳತನದ ಆರೋಪದ ಮೇಲೆ 27 ವರ್ಷದ ಉದಯಕುಮಾರ್ ನನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಪೊಲೀಸ್ ವಿಚಾರಣೆ ವೇಳೆಯೇ ಆರೋಪಿ ಮೃತಪಟ್ಟಿದ್ದರು.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಸಿಬಿಐ ವಿಶೇಷ ಕೋರ್ಟ್ ನ್ಯಾಯಾಧೀಶ ಜೆ ನಸ್ಸೆರ್ ಅವರು, ಆರು ಪೊಲೀಸರು ತಪ್ಪಿತಸ್ಥರು ಎಂದು ತೀರ್ಪು ನೀಡಿದ್ದಾರೆ. ಅಲ್ಲದೆ ಒಂದೆರಡು ದಿನದಲ್ಲಿ ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ಹೇಳಿದ್ದಾರೆ.
ಫೋರ್ಟ್ ಮಾಜಿ ಸಹಾಯಕ ಆಯುಕ್ತ ಟೆಕಿ ಹರಿದಾಸ್, ಮಾಜಿ ಸರ್ಕಲ್ ಇನ್ಸ್ ಪೆಕ್ಟರ್ ಇಕೆ ಸಾಬು, ಮಾಜಿ ಸಬ್ ಇನ್ಸ್ ಪೆಕ್ಟ್ರರ್ ಅಜಿತ್ ಕುಮಾರ್ ಹಾಗೂ ಪೊಲೀಸ್ ಪೇದೆಗಳಾದ ಕೆ ಜಿತಕುಮಾರ್ ಮತ್ತು ಎಸ್ ವಿ ಶ್ರೀಕುಮಾರ್ ತಪ್ಪಿತಸ್ಥರು ಎಂದು ಕೋರ್ಟ್ ತೀರ್ಪು ನೀಡಿದೆ.