ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವ್ಯವಸ್ಥೆಯೂ ಅಸಹಾಯಕ - ವೆಂಕಯ್ಯನಾಯ್ಡು

ಅನೇಕ ಕಾನೂನುಗಳಿದ್ದರೂ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಒಲವು ತೋರಿಸುತ್ತಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿರುವಂತೆ ಆರ್ಥಿಕ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವ್ಯವಸ್ಥೆಯೂ ಅಸಹಾಯಕವಾಗಿದೆ ಎಂದು ರಾಜ್ಯಸಭೆಯ ಸಭಾಪತಿ ಎಂ. ವೆಂಕಯ್ಯನಾಯ್ಡು ಹೇಳಿದ್ದಾರೆ.
ವೆಂಕಯ್ಯನಾಯ್ಡು
ವೆಂಕಯ್ಯನಾಯ್ಡು

ನವದೆಹಲಿ :ಅನೇಕ ಕಾನೂನುಗಳಿದ್ದರೂ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಒಲವು ತೋರಿಸುತ್ತಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿರುವಂತೆ  ಆರ್ಥಿಕ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ  ವ್ಯವಸ್ಥೆಯೂ ಅಸಹಾಯಕವಾಗಿದೆ ಎಂದು  ರಾಜ್ಯಸಭೆಯ ಸಭಾಪತಿ ಎಂ. ವೆಂಕಯ್ಯನಾಯ್ಡು ಹೇಳಿದ್ದಾರೆ.

ದೇಶಭ್ರಷ್ಟ ಆರ್ಥಿಕ ಅಪರಾಧಗಳ ಕಾಯ್ದೆ ರಾಜ್ಯಸಭೆಯಲ್ಲಿ ಅಂಗೀಕಾರಕ್ಕೂ ಮುನ್ನಾ ಮಾತನಾಡಿದ ವೆಂಕಯ್ಯನಾಯ್ಡು, ವ್ಯವಸ್ಥೆಯೇ ಅಸಹಾಯಕವಾದರೆ   ದೇಶದ  ಸಾಮಾನ್ಯ ಜನರ ಪರಿಸ್ಥಿತಿ ಏನು ಎಂದು ಅವರು  ನುಡಿದರು.

ಈ ಪ್ರಕರಣದಲ್ಲಿ ಕಾನೂನು ನೀತಿಗಳು ಲಘುವಾಗಿ ಪರಿಣಮಿಸಬಾರದು, ಸದನದಲ್ಲಿ ಅರ್ಥಪೂರ್ಣ ಸಲಹೆ ನೀಡುವಂತೆ ಅವರು ಆಗ್ರಹಿಸಿದರು. ಇದರಿಂದಾಗಿ ಬೇನಾಮಿ ಆಸ್ತಿ, ಕಾನೂನು ಕ್ರಮ, ಅಪರಾಧಿಯನ್ನು ಬೇರೆ ದೇಶದಿಂದ ಕರೆತರುವುದು  ಮತ್ತಿತರ ವಿಷಯಗಳ ಬಗ್ಗೆ ಜನರು ತಿಳಿಯಲು ಸಾಧ್ಯವಾಗುತ್ತದೆ ಎಂದರು.

ದೇಶಭ್ರಷ್ಟ ಆರ್ಥಿಕ ಅಪರಾಧಿಗಳು ದೇಶ ಬಿಟ್ಟು ಹೋಗದಂತೆ ಕಾನೂನು ಶಿಕ್ಷೆಗೊಳಪಡಿಸುವುದು  ಆರ್ಥಿಕ ಅಪರಾಧಿಗಳ ಮಸೂದೆಯ ಪ್ರಮುಖ ಉದ್ದೇಶವಾಗಿದೆ. ಜುಲೈ 19 ರಂದು ಈ ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿತ್ತು.

ಮಸೂದೆ ಅಂಗೀಕಾರಕ್ಕೂ ಮುನ್ನ ಮಾತನಾಡಿದ ಕಾಂಗ್ರೆಸ್  ಸದಸ್ಯ ವಿವೇಕ್ ಕೆ.ಟಂಕಾ, ಭಾರತದಲ್ಲಿ ಕಾನೂನಿಗಳಿಗೇನೂ ಕೊರತೆ ಇಲ್ಲ ಎಂದು  ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಆದರೆ, ಅಪರಾಧಿಗಳನ್ನು ದೇಶಬಿಟ್ಟು ಹೋಗದಂತೆ ತಡೆಯುವಲ್ಲಿ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.

ದೇಶದ ಒಳಗಡೆಯೇ ಶೇ 90 ರಷ್ಟು  ಕಪ್ಪುಹಣವಿದೆ. ಹೊರಗಡೆ ಕೇವಲ ಶೇ. 10 ರಷ್ಟು ಕಪ್ಪು ಹಣ  ಇದೆ.  ಲಲಿತ್ ಮೋದಿ, ವಿಜಯ್ ಮಲ್ಯ, ಮೆಹೂಲ್ ಚೌಕ್ಸಿ, ನೀರವ್ ಮೋದಿಯಂತವರು 2.4 ಲಕ್ಷ ಕೋಟಿ ರೂ. ಮೊತ್ತದ ಆರ್ಥಿಕ ಅಪರಾಧದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಟಂಕಾ ಹೇಳಿದರು.

ಅಪರಾಧಿಗಳು  ದೇಶಕ್ಕೆ ಬಾರದೆ ಬೇನಾಮಿ ಆಸ್ತಿ  ಹೊಂದದಂತೆ   ತಡೆಯಲಾಗುವುದು, 100 ಕೋಟಿ ರೂಪಾಯಿಗಿಂತಲೂ ಹೆಚ್ಚು ಮೊತ್ತಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಈ ಕಾನೂನಿನಡಿಯಲ್ಲಿ ವಿಚಾರಣೆ ನಡೆಸಲಾಗುವುದು, ತಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು   ಎಂದು ಹಂಗಾಮಿ ವಿತ್ತ ಸಚಿವ ಪಿಯೂಷ್ ಗೊಯಲ್ ಹೇಳಿದರು

ದೇಶಭ್ರಷ್ಟ ಆರ್ಥಿಕ ಅಪರಾಧಿಗಳಿಗೆ ನೀಡುವ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸುವಂತೆ  ಎಐಎಡಿಎಂಕೆ  ಸದಸ್ಯ ಎ. ನವನೀತಕೃಷ್ಣನ್ ಸರ್ಕಾರಕ್ಕೆ ಸಲಹೆ ನೀಡಿದರು.
ಕಾಂಗ್ರೆಸ್ ಸದಸ್ಯ ಎಂವಿ ರಾಜೀವ್ ಗೌಡ,ಮಾತನಾಡಿ, ಆರ್ಥಿಕ ಅಪರಾಧಿಗಳು ದೇಶಬಿಟ್ಟು ಹೊರಗೆ ಹೋಗದಂತೆ ಮಸೂದೆಯಲ್ಲಿ ಪ್ರಸ್ತಾವಿಸಲಾಗಿದೆ .  ದೇಶ ಬಿಟ್ಟು ಹೋಗಿರುವ ಅಪರಾಧಿಗಳಲ್ಲಿ ಯಾರಾದರೂ ಒಬ್ಬರನ್ನಾದರೂ 2019ಕ್ಕೂ  ಸರ್ಕಾರ ಕರೆತರುತ್ತದೆಯಾ ಎಂದು ಸರ್ಕಾರಕ್ಕೆ ಸವಾಲು ಹಾಕಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com