ಆಲಿಂಗನದ ವಿಷಯ: ಈಗ ಬಿಜೆಪಿ ಸಂಸದರು ನಾನು ಎದುರಾದರೆ 2 ಹೆಜ್ಜೆ ಹಿಂದಿಡುತ್ತಾರೆ- ರಾಹುಲ್ ಗಾಂಧಿ

ಲೋಕಸಭೆಯ ಕಲಾಪದ ವೇಳೆ ಭಾಷಣದ ಮಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪ್ಪಿಕೊಂಡು ಸುದ್ದಿಯಾಗಿದ್ದ ರಾಹುಲ್ ಗಾಂಧಿ ಈಗ ಮತ್ತೊಮ್ಮೆ ಅಪ್ಪುಗೆಯ ಬಗ್ಗೆ ಮಾತನಾಡಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ
ನವದೆಹಲಿ: ಲೋಕಸಭೆಯ ಕಲಾಪದ ವೇಳೆ ಭಾಷಣದ ಮಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪ್ಪಿಕೊಂಡು ಸುದ್ದಿಯಾಗಿದ್ದ ರಾಹುಲ್ ಗಾಂಧಿ ಈಗ ಮತ್ತೊಮ್ಮೆ ಅಪ್ಪುಗೆಯ ಬಗ್ಗೆ ಮಾತನಾಡಿದ್ದಾರೆ. ಮತ್ಯಾರನ್ನ ಅಪ್ಪಿಕೊಳ್ಳುತ್ತಾರೆ ಎಂದು ಹುಬ್ಬೇರಿಸಬೇಡಿ, ಈ ಬಾರಿ ಅವರು ಬಿಜೆಪಿ ಸಂಸದರ ಬಗ್ಗೆ ಮಾತನಾಡಿದ್ದು, ಬಿಜೆಪಿ ಸಂಸದರಿಗೆ ನಾನು ಎದುರಾದರೆ 2 ಹೆಜ್ಜೆ ಹಿಂದಿರುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ನೀವು ವಿರೋಧಿಗಳೊಂದಿಗೆ ನಿಮ್ಮ ಎಲ್ಲಾ ಶಕ್ತಿಯನ್ನೂ ಬಳಸಿ ಹೋರಾಡಬಹುದು, ಆದರೆ ದ್ವೇಷ ಎಂಬುದು ಆಯ್ಕೆಯಾಗಿರುತ್ತದೆ, ಬಿಜೆಪಿ-ಕಾಂಗ್ರೆಸ್ ನಡುವೆ ಹೋರಾಟ ಇದ್ದೇ ಇರುತ್ತದೆ, ಆದರೆ ನಾವು ಅವರನ್ನು ದ್ವೇಷಿಸುವುದಿಲ್ಲ ಆದರೆ ಅದನ್ನೇ ಅವರೂ ಪಾಲಿಸುತ್ತಾರಾ ಎಂಬುದು ಗೊತ್ತಿಲ್ಲ. ಈಗ ನಾನು ಬಿಜೆಪಿ ಸಂಸದರಿಗೆ ಎದುರಾದರೆ, ಅವರನ್ನೂ ಅಪ್ಪಿಕೊಳ್ಳುತ್ತೇನೆಂದುಕೊಂಡಿದ್ದು 2 ಹೆಜ್ಜೆ ಹಿಂದಿಡುತ್ತಾರೆ, ನಾನು ಯಾರನ್ನೂ ದ್ವೇಷಿಸುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 
ಪತ್ರಕರ್ತ ಕರಣ್ ಥಾಪರ್ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ. ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ವೇಳೆ ಭಾಷಣ ಮಾಡಿದ್ದ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯನ್ನು ಅಪ್ಪಿಕೊಂಡು, ಕಣ್ಣು ಹೊಡೆದು ತೀವ್ರ ಟೀಕೆಗೆ ಗುರಿಯಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com