ಸೋನಮ್ ವಾಂಗ್ ಚುಕ್
ದೇಶ
ಇಬ್ಬರು ಭಾರತೀಯರಿಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ
ಈ ವರ್ಷ ಏಷ್ಯಾದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ರಾಮನ್ ಮ್ಯಾಗ್ಸೆಸೆ ಗೌರವಕ್ಕೆ ಇಬ್ಬರು ಭಾರತೀಯರು ಬಾಜನರಾಗಿದ್ದಾರೆ...
ನವದೆಹಲಿ: ಈ ವರ್ಷ ಏಷ್ಯಾದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ರಾಮನ್ ಮ್ಯಾಗ್ಸೆಸೆ ಗೌರವಕ್ಕೆ ಇಬ್ಬರು ಭಾರತೀಯರು ಬಾಜನರಾಗಿದ್ದಾರೆ.
ಭಾರತದ ಭರತ್ ವಟ್ವಾನಿ ಮತ್ತು ಸೋನಮ್ ವಾಂಗ್ ಚುಕ್ ಅವರ ಸಾಧನೆ ಮತ್ತು ಸೇವೆಯನ್ನು ಗುರುತಿಸಿ 2018ನೇ ಸಾಲಿನ ಮ್ಯಾಗ್ಸೆಸೆ ಪ್ರಶಸ್ತಿ ನೀಡಲಾಗಿದೆ.
ಲಡಾಕ್ ಮೂಲದ ಎಂಜಿನಿಯರ್ ಆಗಿರುವ 51 ವರ್ಷದ ಸೋನಮ್ ವಾಂಗ್ ಚುಕ್ ಅವರು, ಪಶ್ಚಿಮ ಹಿಮಾಲಯದ ಮರುಭೂಮಿಯಲ್ಲಿ ಕೃಷಿಗೆ ನೀರಿನ ಕೊರತೆಯನ್ನು ನೀಗಿಸಲು ಐಸ್ ಸ್ತೂಪ ನಿರ್ಮಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.
ಇನ್ನು ಭರತ್ ವಟ್ವಾನಿ ಅವರಿಗೆ ಅವರ ಅಸಾಧರಣ ಧೈರ್ಯ ಮತ್ತು ಬಹಿಷ್ಕರಿಸಿದ ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಅವರ ಘನತೆಯನ್ನು ಪುನಃಸ್ಥಾಪಿಸುವ ಕಾರ್ಯವನ್ನು ಗುರುತಿಸಿ ಮ್ಯಾಗ್ಸೆಸೆ ಪ್ರಶಸ್ತಿ ನೀಡಲಾಗಿದೆ.
1957ರಲ್ಲಿ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಫಿಲಿಪ್ಪೀನ್ಸ್ ನ ಮೂರನೇ ಅಧ್ಯಕ್ಷರ ಹೆಸರಲ್ಲಿ ಸ್ಥಾಪಿಸಲಾಗಿದ್ದು, ಇದು ಏಷ್ಯಾದ ಪ್ರತಿಷ್ಠಿತ ಪ್ರಶಸ್ತಿ ಎಂದು ಕರೆಯಲ್ಪಡುತ್ತದೆ. ಏಷ್ಯಾ ವಲಯದಲ್ಲಿನ ಸಾಧಕರಿಗೆ ಮ್ಯಾಗ್ಸೆಸೆ ಪ್ರತಿಷ್ಠಾನ ಈ ಪ್ರಶಸ್ತಿ ನೀಡುತ್ತದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ