ನವದೆಹಲಿ: ಕಳೆದ 3 ವರ್ಷಗಳಲ್ಲಿ ಭೇಟಿ ಬಚಾವೋ, ಭೇಟಿ ಪಡಾವೋ ಯೋಜನೆಗಾಗಿ 282 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ರಾಜ್ಯ ಸಚಿವರಾದ ವಿರೇಂದ್ರ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, 161 ಜಿಲ್ಲೆಗಳ ಪೈಕಿ 104 ರಲ್ಲಿ ಲಿಂಗಾನುಪಾತ ಸುಧಾರಣೆ ಕಂಡಿದೆ ಎಂದು ರಾಜ್ಯಸಭೆಗೆ ತಿಳಿಸಿದ್ದಾರೆ. 2015-16 ನೇ ಸಾಲಿನಲ್ಲಿ 59.37 ಕೋಟಿ ಖರ್ಚು ಮಾಡಲಾಗಿತ್ತು. 2016-17 ರಲ್ಲಿ 28.65 ಕೋಟಿ, 2017-18 ರಲ್ಲಿ 169.10 ಕೋಟಿ ರೂಪಾಯಿಗಳನ್ನು ಯೋಜನೆಗಾಗಿ ಖರ್ಚು ಮಾಡಲಾಗಿದೆ. ಇನ್ನು 2018-19 ರಲ್ಲಿ 25.40 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಈಗ ಹುಟ್ಟುತ್ತಿರುವ ಮಕ್ಕಳ ಪೈಕಿ ಲಿಂಗಾನುಪಾತ ತೀವ್ರಾಗಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಮಹಿಳೆಯರ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಭೇಟಿ ಬಚಾವೋ, ಭೇಟಿ ಪಡಾವೋ ಯೋಜನೆ ಜಾರಿಗೆ ತಂದಿತ್ತು.