
ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಚೌಕಿದಾರ್, ಭಾಗೀದಾರ್ ಟೀಕೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಇಂದು ವಾಗ್ದಾಳಿ ನಡೆಸಿದ್ದಾರೆ. ಇದು ಟೀಕೆಯಲ್ಲಾ ಅಭಿನಂದನೆ ಅಂತಾ ಭಾವಿಸಿರುವುದಾಗಿ ಅವರು ಹೇಳಿದ್ದಾರೆ.
ಕೆಲ ದಿನಗಳಲ್ಲಿ ನನ್ನನ್ನು ದೇಶದ ಕಾವಲುಗಾರ ಅಲ್ಲ ಭಾಗಿದಾರ್ ಅಂತಾ ಪ್ರತಿಪಕ್ಷಗಳು ಕರೆಯುತ್ತಿವೆ ಆದರೆ, ನಾನು ಬಡವರ ಸಂಕಷ್ಟಗಳಲ್ಲಿ ಭಾಗಿದ್ದಾರ ನಾಗಿದ್ದೇನೆ ಎಂಬುದಕ್ಕೆ ಅಭಿನಂದನೆ ಸಲ್ಲಿಸಲಾಗುತ್ತಿದೆ ಎಂದುಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಈ ಆರೋಪವನ್ನು ಅಭಿನಂದನೆ ಅಂದುಕೊಂಡಿದ್ದೇನೆ. ಬಡವರು, ಶ್ರಮಜೀವಿ ಕಾರ್ಮಿಕರು, ಬೆಳೆನಷ್ಟ ಮಾಡಿಕೊಂಡಿರುವ ಬಡ ರೈತರು, ದುಃಖತಪ್ತ ತಾಯಿಯ ಹಾಗೂ ದೇಶ ಸೇವೆಗಾಗಿ ತಮ್ಮ ಪ್ರಾಣ ಮುಡುಪಾಗಿಟ್ಟಿರುವ ಯೋಧರ ಸಂಕಷ್ಟಗಳ ನಿವಾರಣೆಯಲ್ಲಿ ಭಾಗಿಯಾದ ಬಗ್ಗೆ ನನ್ನಗೆ ಹೆಮ್ಮೆಯಿದೆ ಎಂದು ಅವರು ಹೇಳಿದ್ದಾರೆ.
ನಗರಾಭಿವೃದ್ದಿಗೆ ಸಂಬಂಧಿಸಿದ ಮೂರು ಸರಕಾರದ ಉಪಕ್ರಮಗಳ ಮೂರನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಾತನಾಡಿದ ಮೋದಿ , 2022ರೊಳಗೆ ಸೂರು ಇಲ್ಲದ ಎಲ್ಲ ಜನರಿಗೂ ಸರ್ಕಾರ ಸೂರು ಕಲ್ಪಿಸಲಿದೆ ಎಂದು ಭರವಸೆ ನೀಡಿದರು.
Advertisement