ಮುಸ್ಲಿಂ ಹತ್ಯೆಗಳು ಮುಂದುವರೆದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ: ಪಿಡಿಪಿ ಮುಖಂಡ

ಮುಸ್ಲಿಂ ವಿರುದ್ಧದ ಸಾಮೂಹಿಕ ಹಲ್ಲೆ ಪ್ರಕರಣಗಳು ಮುಂದುವರೆದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪಿಡಿಪಿ ಮುಖಂಡ ಮುಜಾಫರ್ ಹುಸೈನ್ ಬೇಗ್ ಎಚ್ಚರಿಕೆ ನೀಡಿದ್ದಾರೆ.
ಪಿಡಿಪಿ ಮುಖಂಡ
ಪಿಡಿಪಿ ಮುಖಂಡ

ಜಮ್ಮು-ಕಾಶ್ಮೀರ: ಮುಸ್ಲಿಂ ವಿರುದ್ಧದ ಸಾಮೂಹಿಕ ಹಲ್ಲೆ ಪ್ರಕರಣಗಳು ಮುಂದುವರೆದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪಿಡಿಪಿ ಮುಖಂಡ ಮುಜಾಫರ್ ಹುಸೈನ್ ಬೇಗ್ ಎಚ್ಚರಿಕೆ ನೀಡಿದ್ದಾರೆ.

ಗೋವು, ಎಮ್ಮೆಗಳ ಹೆಸರಿನಲ್ಲಿ ಮುಸ್ಲಿಂರ ಹತ್ಯೆಗಳನ್ನು ನಿಲ್ಲಿಸಬೇಕಾಗುತ್ತದೆ. ಇಲ್ಲದಿದ್ದರೆ, ಫಲಿತಾಂಶ ಒಳ್ಳೇಯ ರೀತಿಯದ್ದಾಗಿರುವುದಿಲ್ಲ ಎಂದಿದ್ದಾರೆ.

ಶ್ರೀನಗರದಲ್ಲಿ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜಸ್ತಾನದ ಆಳ್ವಾರ್ ನಲ್ಲಿ  ಗೋವುಗಳ ಕಳ್ಳರೆಂದು ಅನುಮಾನಿಸಿ ಅಕ್ಬರ್ ಖಾನ್ ಮೇಲೆ ಸಾಮೂಹಿಕ ಹಲ್ಲೆ ನಡೆಸಿ ಹತ್ಯೆಗೈದಿರುವ ಬಗ್ಗೆ ಮುಜಾಫರ್ ಹುಸೈನ್ ಬೇಗ್ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೂ ಮುಂಚೆ ಅಳ್ವಾರ್ ಜಿಲ್ಲೆಯಲ್ಲಿಯೇ  ಪೆಹುಲ್ ಖಾನ್ ಎಂಬುವರನ್ನು ಹತ್ಯೆ ಮಾಡಲಾಗಿತ್ತು. ಆದಾಗ್ಯೂ, ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸಾಮೂಹಿಕ ಹಲ್ಲೆಗಳಲ್ಲಿ ಪಾಲ್ಗೊಳ್ಳುವವರ ವಿರುದ್ಧ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಕೇಂದ್ರ ಗೃಹ ಸಚಿವಾಯದ ಮಾಹಿತಿ ಪ್ರಕಾರ 2014 ಮಾರ್ಚ್ 3ರಿಂದ 2018ರವರೆಗೂ ದೇಶದ 9 ರಾಜ್ಯಗಳಲ್ಲಿ 40 ಸಾಮೂಹಿಕ ಹಲ್ಲೆ ಪ್ರಕರಣಗಳಲ್ಲಿ 45 ಮಂದಿ ಸಾವನ್ನಪ್ಪಿದ್ದಾರೆ. ಸಾಮೂಹಿಕ ಹಲ್ಲೆ  ಸಂಬಂಧ ಸೂಕ್ತ ಕಾನೂನು ರೂಪಿಸುವಂತೆ ಜುಲೈ 17 ರಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com