
ನವದೆಹಲಿ: ಪರಿಶಿಷ್ಟ ಜಾತಿ, ಪಂಗಡದ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಸಂಬಂಧ ತಪ್ಪು ತೀರ್ಪು ನೀಡಿರುವ ಮಾಜಿ ಸುಪ್ರೀಂಕೋರ್ಟ್ ನ್ಯಾಯಾಧೀಶ ಎ. ಕೆ. ಗೊಯೆಲ್ ಅವರನ್ನು ಎನ್ ಜಿಟಿ ಮುಖ್ಯಸ್ಥ ಸ್ಥಾನದಿಂದ ವಜಾಗೊಳಿಸುವಂತೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ರಾಮ್ ದಾಸ್ ಅಠಾವಳೆ ಒತ್ತಾಯಿಸಿದ್ದಾರೆ.
ನಾನೂ ಕೂಡಾ ಎನ್ ಡಿಎ ಮೈತ್ರಿಕೂಟದ ಭಾಗವಾಗಿದ್ದೇನೆ. ಅವರು ದಲಿತರ ಭಾವನೆಗಳಿಗೆ ಧಕ್ಕೆ ತಂದಿದ್ದು, ಅವರು ಹೊಂದಿರುವ ಸ್ಥಾನದಿಂದ ಈ ಕೂಡಲೇ ವಜಾಗೊಳಿಸಬೇಕೆಂಬುದು ತಮ್ಮ ಬೇಡಿಕೆಯಾಗಿದೆ ಎಂದು ಅಠಾವಳೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಾಧೀಶರಾಗಿರುವ ಎಕೆ ಗೊಯೆಲ್ ಅವರನ್ನು ಐದು ವರ್ಷಗಳ ಅವಧಿಯ ಎನ್ ಜಿ ಟಿ ಮುಖ್ಯಸ್ಥರಾಗಿ ಜುಲೈ 6 ರಂದು ನೇಮಕ ಮಾಡಲಾಗಿತ್ತು.
ಪರಿಶಿಷ್ಟ ಜಾತಿ, ಪಂಗಡ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಲ್ಲಿ ಯಾವುದೇ ದೂರು ದಾಖಲಾದ ಕೂಡಲೇ ಬಂಧಿಸಬಾರದೆಂದು ಜುಲೈ 20 ರಂದು ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿದ್ದ ಗೊಯೆಲ್ ಹಾಗೂ ಯುವಿ ಲಲಿತ್ ಅವರನ್ನೊಳಗೊಂಡ ಪೀಠ ನಿರ್ದೇಶ ನೀಡಿತ್ತು.
ಈ ತೀರ್ಪನ್ನು ಹಲವು ರಾಜಕೀಯ ಪಕ್ಷಗಳು ಹಾಗೂ ದಲಿತ ಸಮುದಾಯದಕ್ಕೆ ಸೇರಿದ ನಾಯಕರು ವಿರೋಧಿಸಿದ್ದರು.
Advertisement