ರಾಫೆಲ್ ಡೀಲ್; ತೆರಿಗೆದಾರರು ಮೋದಿ ಸ್ನೇಹಿತನಿಗೆ 1 ಲಕ್ಷ ಕೋಟಿ ರು. ಪಾವತಿಸಲಿದ್ದಾರೆ: ರಾಹುಲ್

ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ಮುಂದುವರೆಸಿರುವ...
ನರೇಂದ್ರ ಮೋದಿ, ರಾಹುಲ್ ಗಾಂಧಿ
ನರೇಂದ್ರ ಮೋದಿ, ರಾಹುಲ್ ಗಾಂಧಿ
ನವದೆಹಲಿ: ರಾಫೆಲ್ ಡೀಲ್ ಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ತೆರಿಗೆದಾರರು ಮುಂದಿನ 50 ವರ್ಷಗಳ ಕಾಲ 'ಮಿಸ್ಟರ್ 56 ಇಂಚು' ಸ್ನೇಹಿತನಿಗೆ 1 ಲಕ್ಷ ಕೋಟಿ ರುಪಾಯಿ ಪಾವತಿಸಲಿದ್ದಾರೆ ಎಂದು ಶನಿವಾರ ಆರೋಪಿಸಿದ್ದಾರೆ.
ಭಾರತ ಖರೀದಿಸುತ್ತಿರುವ 36 ರಾಫೆಲ್ ಯುದ್ಧ ವಿಮಾನಗಳ ನಿರ್ವಹಣೆಗಾಗಿ ಮುಂದಿನ 50 ವರ್ಷಗಳ ಕಾಲ ತೆರಿಗೆದಾರರು  'ಮಿಸ್ಟರ್ 56 ಇಂಚು' ಸ್ನೇಹಿತ ಜೆವಿ(ಜಂಟಿ ಹೂಡಿಕೆ)ಗೆ 1 ಲಕ್ಷ ಕೋಟಿ ರುಪಾಯಿ ಪಾವತಿಸಲಿದ್ದಾರೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ತಮ್ಮ ಟ್ವೀಟ್ ಗೆ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ನ ಪ್ರೆಜೆಂಟೆಷನ್ ಅನ್ನು ಲಗತ್ತಿಸಿರುವ ಕಾಂಗ್ರೆಸ್ ಅಧ್ಯಕ್ಷ, ಇದರಲ್ಲಿ ಸತ್ಯಾಂಶ ಇದೆ. ಆದರೆ ರಕ್ಷಣಾ ಸಚಿವೆ ಎಂದಿನಂತೆ ಇದನ್ನು ತಳ್ಳಿಹಾಕಲಿದ್ದಾರೆ ಎಂದು ದೂರಿದ್ದಾರೆ.
ಇದಕ್ಕು ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಫೇಲ್ ಫೈಟರ್ ಜೆಟ್ ಒಪ್ಪಂದಕ್ಕಾಗಿ 20 ಬಿಲಿಯನ್ ಅಮೆರಿಕನ್ ಡಾಲರ್ (130,000 ಕೋಟಿ) ಮೌಲ್ಯದ ರಿಲಯನ್ಸ್ ಡಿಫೆನ್ಸ್ ಲೈಫ್ ಸೈಕಲ್ ಒಡಂಬಡಿಕೆ ಮಾಡಿಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ  ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com