ಗುಜರಾತ್: ದರೋಡೆಕೋರರೆಂದು ಅನುಮಾನಿಸಿ ವ್ಯಕ್ತಿಯ ಹತ್ಯೆ

ದರೋಡೆಕೋರರು ಎಂದು ಅನುಮಾನಿಸಿ ಓರ್ವನನ್ನು ಬಡಿದು ಹತ್ಯೆ ಮಾಡಿದ ಘಟನೆ ಗುಜರಾತ್ ನ ದಹೊದ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ದಹೊದ್: ದರೋಡೆಕೋರರು ಎಂದು ಅನುಮಾನಿಸಿ ಓರ್ವನನ್ನು ಬಡಿದು ಹತ್ಯೆ ಮಾಡಿದ ಘಟನೆ ಗುಜರಾತ್ ನ ದಹೊದ್ ಜಿಲ್ಲೆಯಲ್ಲಿ ನಡೆದಿದೆ ಎಂದು ಭಾನುವಾರ ಪೊಲೀಸರು ತಿಳಿಸಿದ್ದಾರೆ.
ದಹೊದ್ ನಿಂದ 35 ಕಿ.ಮೀ.ದೂರದಲ್ಲಿರುವ ಕಾಳಿ ಮೆಹುಡಿ ಗ್ರಾಮಕ್ಕೆ ನಿನ್ನೆ ರಾತ್ರಿ ದರೋಡೆ ಮಾಡುವ ಉದ್ದೇಶದಿಂದ ಒಂದು ಡಜನ್ ಮಂದಿ ಆಗಮಿಸಿದ್ದರು. ಇವರು ದಡೆಕೋರರಿರಬೇಕು ಎಂದು ಭಾವಿಸಿದ ಗ್ರಾಮಸ್ಥರು ಅವರ ಮೇಲೆ ದಾಳಿ ಮಾಡಿದ್ದಾರೆ. ಇಬ್ಬರು ಮಾತ್ರ ಗ್ರಾಮಸ್ಥರ ಕೈಗೆ ಸಿಕ್ಕಿದ್ದು, ಉಳಿದವರು ಪರಾರಿಯಾಗಿದ್ದಾರೆ. ಆ ಪೈಕಿ ಓರ್ವ ಮೃತಪಟ್ಟಿದ್ದು, ಮತ್ತೊರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಲಿಮ್ಡಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಪಿಎಂ ಜುದಾಲ್ ಅವರು ತಿಳಿಸಿದ್ದಾರೆ.
ಅಜ್ಮಲ್ ಮೊಹನಿಯಾ ದೇಶದಲ್ಲಿ ಗುಂಪು ಹಿಂಸಾಚಾರಕ್ಕೆ ಬಲಿಯಾದ ಮತ್ತೊಬ್ಬ ದುರ್ದೈವಿಯಾಗಿದ್ದಾರೆ.
ಗಾಯಗೊಂಡ ವ್ಯಕ್ತಿಯನ್ನು ಭರು ಮಥುರ್ ಎಂದು ಗುರುತಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಇಬ್ಬರು ವ್ಯಕ್ತಿಗಳು ಅಪರಾಧ ಹಿನ್ನೆಲೆಯಲ್ಲಿ ಹೊಂದಿದ್ದು, ಇತ್ತೀಚಿಗಷ್ಟೇ ದಹೊದ್ ಉಪ ಕಾರಾಗೃಹದಿಂದ ಬಿಡುಗಡೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com