ಉದ್ಯಮಿಗಳೊಂದಿಗೆ ಕಾಣಿಸಿಕೊಳ್ಳಲು ಹೆದರುವುದಿಲ್ಲ: ಪ್ರಧಾನಿ ಮೋದಿ

ನಾನು ಉದ್ಯಮಿಗಳೊಂದಿಗೆ ಬಹಿರಂಗವಾಗಿ ಕಾಣಿಸಿಕೊಳ್ಳುವುದಕ್ಕೆ ಹೆದರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ....
ನರೇಂದ್ರ ಮೋದಿ
ನರೇಂದ್ರ ಮೋದಿ
ಲಖನೌ: ನಾನು ಉದ್ಯಮಿಗಳೊಂದಿಗೆ ಬಹಿರಂಗವಾಗಿ ಕಾಣಿಸಿಕೊಳ್ಳುವುದಕ್ಕೆ ಹೆದರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮನ್ನು ಟೀಕಿಸುತ್ತಿದ್ದ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ನನ್ನ ಉದ್ದೇಶಗಳು ಸ್ಪಷ್ಟವಾಗಿರುವುದರಿಂದ ನಾನು ಉದ್ಯಮಿಗಳೊಂದಿಗೆ ನಿಂತುಕೊಳ್ಳಲು ಭಯಪಡುವುದಿಲ್ಲ. ನಮ್ಮ ಧ್ಯೇಯ, ಉದ್ದೇಶ ಉದಾತ್ತವಾಗಿದ್ದರೆ ಯಾರ ಜತೆ ಬೇಕಾದರೂ ಕಾಣಿಸಿಕೊಳ್ಳಲು ಹಿಂಜರಿಯುವುದಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ.
ಇಂದು ಲಖನೌನಲ್ಲಿ 60 ಸಾವಿರ ಕೋಟಿ ರುಪಾಯಿ ವೆಚ್ಚದ 18 ಹೂಡಿಕೆ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ, ರೈತರು, ಬ್ಯಾಂಕ್ ​ಗಳು, ಸರ್ಕಾರಿ ಉದ್ಯೋಗಿಗಳು ಮತ್ತು ಕಾರ್ಮಿಕರು, ಉದ್ಯಮಿಗಳು ಕೂಡ ರಾಷ್ಟ್ರ ನಿರ್ಮಾಣಕ್ಕೆ ತಮ್ಮಕೊಡುಗೆ ನೀಡಿದ್ದಾರೆ. ಎಲ್ಲಾ ಉದ್ಯಮಿಗಳನ್ನು ಕಳ್ಳರು ಎಂದು ಲೇಬಲ್ ಮಾಡುವುದು ಸೂಕ್ತವಲ್ಲ ಎಂದಿದ್ದಾರೆ.
ಮಹಾತ್ಮ ಗಾಂಧೀಜಿಯವರು ಉದ್ಯಮಿ ಘನಶ್ಯಾಮ್ ದಾಸ್ ಬಿರ್ಲಾ ಅವರೊಂದಿಗೆ ಬಹಿರಂಗವಾಗಿ ಕಾಣಿಸಿಕೊಳ್ಳಲು ಎಂದಿಗೂ ಹಿಂಜರಿಯಲಿಲ್ಲ. ಅವರು ಬಿರ್ಲಾ ಹೌಸ್ ನಲ್ಲಿಯೇ ಉಳಿಯುತ್ತಿದ್ದರು. ಯಾಕೆಂದರೆ ಗಾಂಧೀಜಿ ಅವರ ಉದ್ದೇಶ ಮತ್ತು ಧ್ಯೇಯ ಉತ್ತಮವಾಗಿತ್ತು. ಹಾಗೆಯೇ ನನ್ನ ಉದ್ದೇಶ ಉದಾತ್ತವಾಗಿರುವ ಕಾರಣ ಉದ್ಯಮಿಗಳ ಜತೆ ಕಾಣಿಸಿಕೊಳ್ಳಲು ಯಾವುದೇ ಹೆದರಿದೆ ಇಲ್ಲ ಮತ್ತು ಹೆದರುವ ವ್ಯಕ್ತಿಯೂ ನಾನಲ್ಲ ಎಂದು ಮೋದಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com