ದೆಹಲಿ: ಯಮುನಾ ಸೇತುವೆ ಮುಳುಗಡೆ ಹಂತಕ್ಕೆ : 27 ರೈಲು ಸೇವೆ ರದ್ದು

ಯಮುನಾ ನದಿಯ ನೀರಿನ ಮಟ್ಟ 205.53 ಮೀಟರ್ ತಲುಪಿದ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಹಳೆಯ ಯಮುನಾ ಸೇತುವೆ ಲೊಹಾಪೌಲ್ ಮೇಲಿನ ರೈಲು ಸೇವೆಯನ್ನು ರದ್ದುಗೊಳಿಸಿದೆ.
ಯಮುನಾ ಸೇತುವೆ
ಯಮುನಾ ಸೇತುವೆ

ನವದೆಹಲಿ: ಯಮುನಾ ನದಿಯ ನೀರಿನ ಮಟ್ಟ  205.53 ಮೀಟರ್ ತಲುಪಿದ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ  ಹಳೆಯ ಯಮುನಾ ಸೇತುವೆ ಲೊಹಾಪೌಲ್ ಮೇಲಿನ ರೈಲು ಸೇವೆಯನ್ನು ರದ್ದುಗೊಳಿಸಿದೆ.ಯುಮುನಾ ಸೇತುವೆ ಮುಳುಗಡೆ ಹಂತಕ್ಕೆ ತಲುಪಿದ್ದು, 27 ಪ್ರಯಾಣಿಕ ರೈಲುಗಳ ಸೇವೆಯನ್ನು ರದ್ದುಗೊಳಿಸಲಾಗಿದೆ.

ಈ ಮಧ್ಯೆ ಯಮುನಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ರಾಷ್ಟ್ರ ರಾಜಧಾನಿಯ  ಹಳೆಯ ಯುಮನಾ ಸೇತುವೆ ಬಳಿ ವಾಸಿಸುತ್ತಿದ್ದ ಜನರು  ಮನೆ ಕಳೆದುಕೊಳ್ಳುವಂತಾಗಿದ್ದು,  ರಸ್ತೆ ಬದಿಯಲ್ಲಿ ವಾಸಿಸುವಂತಾಗಿದೆ.

ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯ ನೀಡಿಲ್ಲ. ಇದರಿಂದಾಗಿ ಎಲ್ಲರೂ ನೋಡುವಂತಾಗಿದೆ. ಈಗ ಬೀದಿಯಲ್ಲಿ ಬದುಕುವಂತಾಗಿದ್ದು, ಸೇತುವೆ ಬಳಿಯೇ ವಾಸಿಸುತ್ತಿರುವಾದಿಗ ಸಂತ್ರಸ್ತ ಕುಟುಂಬದ ಸದಸ್ಯರೊಬ್ಬರು  ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಸೇತುವೆ ಬಳಿ ತಾತ್ಕಾಲಿಕವಾಗಿ ನಿರ್ಮಿಸಿಕೊಂಡಿರುವ ಮನೆಗಳಲ್ಲಿ ವಾಸಿಸುತ್ತಿದ್ದೇವೆ. ಆದಾಗ್ಯೂ , ಇಲ್ಲಿಂದ ಬೇರೆಡೆಗೆ ಹೋಗುವಂತೆ ಸರ್ಕಾರ ಹೇಳುತ್ತಿದೆ. ಇದನ್ನು ಕಳೆದುಕೊಂಡರೆ ಬೇರೆ ಏನ್ನೂ ಇಲ್ಲದಂತಾಗುತ್ತದೆ ಎಂದು  ನೊಂದ ಸಂತಸ್ತರೊಬ್ಬರು ಅಳಲು ತೋಡಿಕೊಂಡಿದ್ದಾರೆ.

ಯುಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಹಳೆಯ ಯಮುನಾ ಸೇತುವೆಯಲ್ಲಿ ಸಂಚಾರ ಸೇವೆಯನ್ನು ನಿರ್ಬಂಧಿಸಿ  ಪಶ್ಟಿಮ ದೆಹಲಿ ಜಿಲ್ಲಾ ಮ್ಯಾಜಿಸ್ಟ್ರೇಟ್  ನಿನ್ನೆ ಆದೇಶ ಹೊರಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com