ಮೋದಿ ಸರ್ಕಾರದಲ್ಲಿ ಮುಸ್ಲಿಮರ ದುಸ್ಥಿತಿ ಬಗ್ಗೆ ರಾಹುಲ್ ಗೆ ಪತ್ರ ಬರೆದ ಜಮ್ಮಾ ಮಸೀದಿ ಇಮಾಮ್ ಬುಖಾರಿ!

ದೇಶದಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ಹಲ್ಲೆಗಳ ಬಗ್ಗೆ ನಿಮ್ಮ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿ ಎಂದು ದೆಹಲಿಯ ಜಮ್ಮಾ ಮಸೀದಿಯ ಇಮಾಮ್ ಬುಖಾರಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದಾರೆ.
ಮೋದಿ ಸರ್ಕಾರದಲ್ಲಿ ಮುಸ್ಲಿಮರ ದುಸ್ಥಿತಿ ಬಗ್ಗೆ ರಾಹುಲ್ ಗೆ ಪತ್ರ ಬರೆದ ಜಮ್ಮಾ ಮಸೀದಿ ಇಮಾಮ್ ಬುಖಾರಿ!
ಮೋದಿ ಸರ್ಕಾರದಲ್ಲಿ ಮುಸ್ಲಿಮರ ದುಸ್ಥಿತಿ ಬಗ್ಗೆ ರಾಹುಲ್ ಗೆ ಪತ್ರ ಬರೆದ ಜಮ್ಮಾ ಮಸೀದಿ ಇಮಾಮ್ ಬುಖಾರಿ!
ನವದೆಹಲಿ: ದೇಶದಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ಹಲ್ಲೆಗಳ ಬಗ್ಗೆ ನಿಮ್ಮ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿ ಎಂದು ದೆಹಲಿಯ ಜಮ್ಮಾ ಮಸೀದಿಯ ಇಮಾಮ್ ಬುಖಾರಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದಾರೆ. 
ಕಳೆದ 7೦ ವರ್ಷಗಳಿಗೆ ಹೋಲಿಸಿದರೆ ಈಗ ದೇಶದಲ್ಲಿ ಮುಸ್ಲಿಮರು ದುಸ್ಥಿತಿಯಲ್ಲಿ ಜೀವಿಸುತ್ತಿದ್ದಾರೆ. ಸಮೂಹ ಹಲ್ಲೆ ಪ್ರಕರಣಗಳಲ್ಲಿ 64 ಅಮಾಯಕ ಮುಸ್ಲಿಮರು ಸಾವನ್ನಪ್ಪಿದ್ದಾರೆ. ಈ ಘಟನೆಗಳ ಬಗ್ಗೆ ನೀವೇಕೆ ಧ್ವನಿ ಎತ್ತಿಲ್ಲ ಎಂದು ರಾಹುಲ್ ಗಾಂಧಿಯನ್ನು ಇಮಾಮ್ ಬುಖಾರಿ ಪ್ರಶ್ನಿಸಿದ್ದಾರೆ. 
ಮುಸ್ಲಿಂ ಯುವಕರು ಟೋಪಿ ಧರಿಸಿ ಮನೆಯಿಂದ ಹೊರಗೆ ಓಡಾಡುವುದೂ ಸಹ ಕಷ್ಟವಾಗಿದೆ. ಜವಾಬ್ದಾರಿಯುತ ಪ್ರತಿಪಕ್ಷವಾಗಿ ಮುಸ್ಲಿಮರ ಮೇಲೆ ನಡೆಯುತ್ತಿರುವ ಹಲ್ಲೆಗಳನ್ನು ತಡೆಗಟ್ಟುವುದಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ ಎಂದು ಇಮಾಮ್ ಬುಖಾರಿ ಹೇಳಿದ್ದಾರೆ. 
ಕಾಂಗ್ರೆಸ್ ಮುಸ್ಲಿಮರಿಗಾಗಿ ಇರುವ ಪಕ್ಷ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದ ಕೆಲವೇ ದಿನಗಳಲ್ಲಿ ಬುಖಾರಿ ರಾಹುಲ್ ಗಾಂಧಿಗೆ ಈ ಪತ್ರ ಬರೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com