ಭಾರತದಾದ್ಯಂತ 10 ಲಕ್ಷಕ್ಕಿಂತಲೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ!

ದೇಶದ ಪ್ರಾಥಮಿಕ ಹಾಗು ಮಾದ್ಯಮಿಕ ಶಾಲಾ ಮಟ್ಟದಲ್ಲಿ ಒಟ್ಟಾರೆ 10 ಲಕ್ಷಕ್ಕಿಂತ ಹೆಚ್ಚು ಶಿಕ್ಷಕ ಹುದ್ದೆ ಖಾಲಿ ಇದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ದೇಶದ ಪ್ರಾಥಮಿಕ ಹಾಗು ಮಾದ್ಯಮಿಕ ಶಾಲಾ ಮಟ್ಟದಲ್ಲಿ ಒಟ್ಟಾರೆ 10 ಲಕ್ಷಕ್ಕಿಂತ ಹೆಚ್ಚು ಶಿಕ್ಷಕ ಹುದ್ದೆ ಖಾಲಿ ಇದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಮಾರ್ಚ್ 31, 2017 ರವರೆಗೂ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಪ್ರಾಥಮಿಕ ಶಾಲಾ ಶಿಕ್ಷಕರ ಕೊರತೆ ಪಟ್ಟಿಯಲ್ಲಿ ಉತ್ತರ ಪ್ರದೇಶ ಪ್ರಥಮ ಸ್ಥಾನದಲ್ಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮಾದ್ಯಮಿಕ ಶಾಲಾ ಶಿಕ್ಷಕರ ಕೊರತೆ ಅತ್ಯಧಿಕವಾಗಿದೆ. ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಿಕ್ಷಕರ ಕೊರತೆ ಬಹು ದೊಡ್ಡ ಸಮಸ್ಯೆಯಾಗಿದೆ.
ಅನುಮತಿ ನೀಡಿದ್ದ ಒಟ್ಟು 51,03,539 ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳಲ್ಲಿ 9,00,316 ಹುದ್ದೆಗಳು ಖಾಲಿ ಇದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಉಪೇಂದ್ರ ಕುಶ್ವಹಾ ಇಂದು ಸಂಸತ್ತಿಗೆ ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಒಟ್ಟು ಹುದ್ದೆ  7,59,828 ಅಷ್ಟಿದ್ದು ಇದರಲ್ಲಿ  2,24,327 ಹುದ್ದೆಗಳು ಖಾಲಿಯಾಗಿವೆ.ಎರಡನೇ ಸ್ಥಾನದಲ್ಲಿ ಬಿಹಾರವಿದ್ದು ಇಲ್ಲಿ 5,92,514  ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳಿದ್ದು ಇದರಲ್ಲಿ 2,03,934 ಹುದ್ದೆಗಳು ಖಾಲಿ ಉಳಿದಿದೆ.
ಆದರೆ ಸಿಕ್ಕಿಂ, ಗೋವಾ, ಒಡಿಶಾ ರಾಜ್ಯಗಳಲ್ಲಿ ಅನುಮತಿಸಲ್ಪಟ್ಟ ಶಿಕ್ಷಕರ ಹುದ್ದೆಗಳೆಲ್ಲವೂ ಭರ್ತಿಯಾಗಿದು ಪ್ರಾಥಮಿಕ ಶಾಲಾ ಮಟ್ಟದ ಯಾವ ಶಿಕ್ಷಕರ ಹುದ್ದೆ ಖಾಲಿಯಾಗಿಲ್ಲ ಎಂದು ಸಚಿವರು ಮಾಹಿತಿ ನಿಡಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು ದೇಶದಾದ್ಯಂತ ಮಾದ್ಯಮಿಕ ಶಾಲೆ ಶಿಕ್ಷಕರ ಒಟ್ಟು ಹುದ್ದೆಗಳು 6,85,895  ಅಷ್ತಿದ್ದು ಇದರಲ್ಲಿ 1,07,689 ಹುದ್ದೆಗಳು ಖಾಲಿಯಾಗಿದೆ ಎಂದರು. ಜಮ್ಮು ಕಾಶ್ಮೀರದಲ್ಲಿ ಅನುಮತಿಸಲಾದ 25,657 ಮಾದ್ಯಮಿಕ ಶಿಕ್ಷಕರ ಹುದ್ದೆಗಳಲ್ಲಿ 21,221  ಹುದ್ದೆಗಳು ಖಾಲಿ ಇದೆ.
ಬಿಹಾರದಲ್ಲಿ 48,468ಮಾದ್ಯಮಿಕ ಶಿಕ್ಷಕರ ಹುದ್ದೆಗಳಿದ್ದು ಇದರಲ್ಲಿ 17,154 ಶಿಕ್ಷಕರ ಹುದ್ದೆ ಖಾಲಿ ಇದೆ.
ರಾಜಸ್ಥಾನ, ದಿಯು ದಮನ್, ಅಂಡಮಾನ್ ನಿಕೋಬಾರ್, ಆಂಧ್ರ ಪ್ರದೇಶ, ಮಣಿಪುರ, ಮಿಜೋರಾಂ ರಾಜ್ಯಗಳಲ್ಲಿ ಮಾದ್ಯಮಿಕ ಶಾಲಾ ಶಿಕ್ಷಕರ ಹುದ್ದೆಗಳು ಖಾಲಿ ಇಲ್ಲ ಎಂದು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com