ಅಕ್ರಮ ಟೆಲಿಫೋನ್ ಎಕ್ಸ್ ಚೆಂಜ್ ಪ್ರಕರಣದಲ್ಲಿ ವಿಚಾರಣೆ ಎದುರಿಸಿ: ದಯಾನಿಧಿ ಮಾರನ್ ಗೆ ಸುಪ್ರೀಂ ಆದೇಶ

ಕೇಂದ್ರದ ಮಾಜಿ ಟೆಲಿಕಾಂ ಸಚಿವ ದಯಾನಿಧಿ ಮಾರನ್ ತನ್ನ ಸಹೋದರ ಕಲಾನಿಧಿ ಮಾರನ್ ಸನ್ ಟಿವಿ ನೆಟ್ ವರ್ಕ್ ಗೆ ಲಾಭವಾಗಲು "ಕಾನೂನುಬಾಹಿರ" ಟೆಲಿಫೋನ್ ಎಕ್ಸ್ ಚೇಂಜ್ ಗಳ ಸ್ಥಾಪನೆಗೆ ಸಂಬಂಧಿಸಿ....
ದಯಾನಿಧಿ ಮಾರನ್
ದಯಾನಿಧಿ ಮಾರನ್
ನವದೆಹಲಿ: ಕೇಂದ್ರದ ಮಾಜಿ ಟೆಲಿಕಾಂ ಸಚಿವ ದಯಾನಿಧಿ ಮಾರನ್ ತನ್ನ ಸಹೋದರ ಕಲಾನಿಧಿ ಮಾರನ್ ಸನ್ ಟಿವಿ ನೆಟ್ ವರ್ಕ್ ಗೆ ಲಾಭವಾಗಲು "ಕಾನೂನುಬಾಹಿರ" ಟೆಲಿಫೋನ್ ಎಕ್ಸ್ ಚೇಂಜ್ ಗಳ ಸ್ಥಾಪನೆಗೆ ಸಂಬಂಧಿಸಿ ವಿಚಾರಣೆ ಎದುರಿಸಬೇಕು ಎಂದು  ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಮದ್ರಾಸ್ ಹೈಕೋರ್ಟ್ ಅರ್ಜಿಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಮಾರನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಇದಕ್ಕೂ ಮುನ್ನ ಜುಲೈ 25ರಂದುಮದ್ರಾಸ್ ಹೈಕೋರ್ಟ್ ಸಿಬಿಐ ನ್ಯಾಯಾಲಯ ಆದೇಶದ ಮೇರೆಗೆ ವಿಚಾರಣೆ ನಡೆಸುವಂತೆ ಆದೇಶ ನೀಡಿ ತೀರ್ಪಿತ್ತಿತ್ತು.
ನ್ಯಾಯಮೂರ್ತಿಗಳಾದ ರಂಜನ್ ಗೊಗೊಯ್,  ಆರ್. ಬಾನುಮತಿ ಮತ್ತು ನವೀನ್ ಸಿನ್ಹಾ ಅವರನ್ನೊಳಗೊಂಡ ಪೀಠವು ಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಮತ್ತು ಎಲ್ಲಾ ಆರೋಪಗಳನ್ನು ವಿಚಾರಣೆ ವೇಳೆ ಪರಿಶೀಲಿಸಲಾಗುತ್ತದೆ ಎಂದಿದೆ.
ಯುಪಿಎ - 1  ಸರ್ಕಾರದ ಅವಧಿಯಲ್ಲಿ ಮಾಹಿತಿ ಮತ್ತು ಸಂಪರ್ಕ ಸಚಿವರಾಗಿದ್ದ ಡಿಎಂಕೆ ಸಂಸದ ದಯಾನಿಧಿ ಮಾರನ್ ತಾವು ಚೆನ್ನೈ ನಲ್ಲಿರುವ ತಮ್ಮ ಖಾಸಗಿ ಗೃಹಗಳಲ್ಲಿ ಅನಧಿಕೃತ ಟೆಲಿಫೋನ್ ಎಕ್ಸ್ ಚೇಂಜ್ ಗಳನ್ನು ಅಳವಡಿಸಿಕೊಂಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com