ಅಸ್ಸಾಂ ಎನ್ಆರ್​ಸಿ: ದೇಶ ತೊರೆಯಲು ಒಪ್ಪದ ಅಕ್ರಮ ವಲಸಿಗರಿಗೆ ಗುಂಡಿಕ್ಕಿ- ಬಿಜೆಪಿ ಶಾಸಕ

ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ ದಾಖಲೆಯಲ್ಲಿ ಹೆಸರಿಲ್ಲದ ಅಕ್ರಮ ವಲಸಿಗರು ದೇಶ ತೊರೆಯಲು ಒಪ್ಪದಿದ್ದರೆ ಗುಂಡಿಕ್ಕಿ ಎಂದು ಬಿಜೆಪಿ ಶಾಸಕರೊಬ್ಬರು...
ರಾಜಾ ಸಿಂಗ್
ರಾಜಾ ಸಿಂಗ್
ತೆಲಂಗಾಣ: ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ ದಾಖಲೆಯಲ್ಲಿ ಹೆಸರಿಲ್ಲದ ಅಕ್ರಮ ವಲಸಿಗರು ದೇಶ ತೊರೆಯಲು ಒಪ್ಪದಿದ್ದರೆ ಗುಂಡಿಕ್ಕಿ ಎಂದು ಬಿಜೆಪಿ ಶಾಸಕರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 
ತೆಲಂಗಾಣದ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಅಸ್ಸಾಂನ ಎನ್ಆರ್​ಸಿ ಬಗ್ಗೆ ಪ್ರತಿಕ್ರಿಯಿಸಿದ್ದು ದೇಶ ಬಿಟ್ಟು ತೆರಳಲು ಒಪ್ಪದ ಅಕ್ರಮ ವಲಸಿಗರನ್ನು ಗುಂಡು ಹಾರಿಸಿಯಾದರೂ ಹೊರ ದಬ್ಬಬೇಕು ಎಂದು ಹೇಳಿದ್ದಾರೆ. 
ಪಾಕಿಸ್ತಾನ ಜತೆಗಿನ 1971ರ ಯುದ್ಧದ ವೇಳೆ ಭಾರತಕ್ಕೆ ನುಸುಳಿದ ಬಾಂಗ್ಲಾದೇಶಿ ಮುಸ್ಲಿಂರು ಇವರಾಗಿದ್ದು, ಭಾರತದ ವಿರುದ್ಧ ಸಂಚಿನ ಭಾಗವಾಗಿ ಇಷ್ಟು ವರ್ಷ ಇಲ್ಲೇ ಉಳಿಸಿಕೊಳ್ಳಲಾಗಿದೆ ಎಂದು ರಾಜಾ ಸಿಂಗ್ ಆರೋಪಿಸಿದ್ದಾರೆ. 
ಎನ್ಆರ್ಸಿ ಪ್ರಕಾರ, ಅಸ್ಸಾಂನಲ್ಲಿ ಒಟ್ಟು 3,29, 91, 384 ಜನರು ರಾಷ್ಟ್ರೀಯ ಪೌರತ್ವ ನೋಂದಣಿಗಾಗಿ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 2,89,83,677 ಮಂದಿ ಕಾನೂನುಬದ್ಧ ಪ್ರಜೆಗಳಾಗಿದ್ದಾರೆ ಎಂದು ತಿಳಿಸಿದೆ. ಇದರಲ್ಲಿ 40 ಲಕ್ಷಕ್ಕೂ ಅಧಿಕ ಜನರು ಅಕ್ರಮ ವಲಸಿಗ ಪ್ರಜೆಗಳಾಗಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com