ವಿವಾದಿತ ಎಫ್ ಆರ್ ಡಿಐ ಮಸೂದೆ ಹಿಂಪಡೆಯಲು ಕೇಂದ್ರ ತೀರ್ಮಾನ

ವಿವಾದಾತ್ಮಕ ಮಸೂದೆಯಾದ ಹಣಕಾಸು ನಿರ್ಣಯ ಮತ್ತು ಠೇವಣಿ ವಿಮಾ ಮಸೂದೆಯನ್ನು ಹಿಂಪಡೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ..
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ವಿವಾದಾತ್ಮಕ ಮಸೂದೆಯಾದ ಹಣಕಾಸು ನಿರ್ಣಯ ಮತ್ತು ಠೇವಣಿ ವಿಮಾ ಮಸೂದೆಯನ್ನು ಹಿಂಪಡೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ.. ಇದನ್ನು ಶಾಸನವನ್ನು ಪರಿಶೀಲಿಸುವ ಸಂಸದೀಯ ಸಮಿತಿಯ ಅಧ್ಯಕ್ಷರಿಗೆ ತಿಳಿಸಲಾಗಿದೆ.
ಹಣಕಾಸು ಸಚಿವ ಪಿಯೂಷ್ ಗೋಯಲ್ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷರಿಗೆ ಎಫ್ ಆರ್ ಡಿಐ ಮಸೂದೆಯನ್ನು ಹಿಂಪಡೆಯುವ ಬಗ್ಗೆ ಪತ್ರ ಬರೆದಿದ್ದಾಗಿ  ತೃಣಮೂಲ ಕಾಂಗ್ರೆಸ್ ನಾಯಕ ಸೌಗತಾ ರಾಯ್ ಲೋಕಸಭೆಯಲ್ಲಿ ತಿಳಿಸಿದ್ದಾರೆ.
ರಾಜಕಾರಣಿಗಳು ಸೇರಿದಂತೆ, ಕೆಲವು ವರ್ಗಗಳ ಜನರು ಕಾಳಜಿ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ತಿಂಗಳ ಪ್ರಾರಂಭದಲ್ಲಿ ಕೇಂದ್ರವು ವಿವಾದಿತ ಮಸೂದೆಯನ್ನು ಹಿಂಅಡೆಯುವುದಾಗಿ ನಿರ್ಧರಿಸಿತು. "ಸರ್ಕಾರವು  ಮಸೂದೆಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದೆ ಎಂದು ಸಚಿವ ಪಿಯೂಷ್ ಗೋಯಲ್ ಸಮಿತಿಯ ಅಧ್ಯಕ್ಷರಿಗೆ ಬರೆದಿದ್ದಾರೆ ... ಇದು ಪ್ರತಿಪಕ್ಷದ ವಿಜಯವಾಗಿದೆ" ಎಂದು ರಾಯ್ ಹೇಳಿದ್ದಾರೆ. ದಿವಾಳಿತನ ಸಂಹಿತೆ (2 ನೇ ತಿದ್ದುಪಡಿ) ಮಸೂದೆಯ ಕುರಿತು ಚರ್ಚೆಯಲ್ಲಿ ಭಾಗವಹಿಸಿದ್ದ ಅವರು ಈ ಮಾತನ್ನು ಹೇಳಿದ್ದಾರೆ.
ಕಳೆದ ವರ್ಷ ಆಗಸ್ಟ್ 11 ರಂದು ಎಫ್ ಆರ್ ಡಿಐ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತು.ಈ ಮಸೂದೆಯು ಉಳಿತಾಯ ಖಾತೆಯಲ್ಲಿರುವ ಠೇವಣಿ ನಿಕ್ಷೇಪಗಳಿಗೆ ಹಾನಿ ಉಂಟುಮಾಡಲಿದೆ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com