ಬೆಳೆ ವಿಮೆ ಪಾವತಿಸಲು ವಿಫಲವಾದರೆ, ಕಂಪನಿಗಳು ಬಡ್ಡಿ ಸಮೇತ ನೀಡಬೇಕು: ಕೇಂದ್ರ

ಕಂಪನಿಗಳು ಬೆಳೆ ವಿಮೆ ಹಣವನ್ನು ಎರಡು ತಿಂಗಳಲ್ಲೇ ಪಾವತಿ ಮಾಡಬೇಕು. ಒಂದು ವೇಳೆ ವಿಳಂಬವಾದರೆ ಬಡ್ಡಿ ಸಮೇತ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಕಂಪನಿಗಳು ಬೆಳೆ ವಿಮೆ ಹಣವನ್ನು ಎರಡು ತಿಂಗಳಲ್ಲೇ ಪಾವತಿ ಮಾಡಬೇಕು. ಒಂದು ವೇಳೆ ವಿಳಂಬವಾದರೆ ಬಡ್ಡಿ ಸಮೇತ ರೈತರಿಗೆ ಹಣ ಪಾವತಿಸಬೇಕು ಎಂದು ಕೇಂದ್ರ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಅವರು ಹೇಳಿದ್ದಾರೆ.
ಕೃಷಿಗೆ ಸಂಬಂಧಿಸಿದ ಅಪಾಯಗಳನ್ನು ತಡೆಯುವುದಕ್ಕಾಗಿ ಕೇಂದ್ರ ಸರ್ಕಾರ 2016ರಿಂದ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಜಾರಿಗೆ ತಂದಿದೆ ಎಂದು ಸಿಂಗ್ ಇಂದು ಲೋಕಸಭೆಗೆ ತಿಳಿಸಿದರು.
ಈ ಯೋಜನೆ ಅಡಿ ಅನಿರೀಕ್ಷಿತ ಘಟನೆಗಳು ಮತ್ತು ಪ್ರಕೃತಿ ವಿಕೋಪಗಳಿಂದ ಉಂಟಾಗುವ ಬೆಳೆ ನಷ್ಟಕ್ಕೆ ವಿಮಾ ಕಂಪನಿಗಳು ಸಕಾಲಕ್ಕೆ ಪರಿಹಾರ ನೀಡಬೇಕು. ಸಂಪೂರ್ಣ ಬೆಳೆಗೆ ವಿಮಾ ರಕ್ಷಣೆ ಒದಗಿಸಲಾಗಿದ್ದು, ವಿಮಾ ಮೊತ್ತವನ್ನು ಕಡಿಮೆಗೊಳಿಸುವ ಅಥವಾ ಮೊಟಕುಗೊಳಿಸುವಂತಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ವಿಮಾ ಕಂಪನಿಗಳು ಎರಡು ತಿಂಗಳೊಳಗೆ ರೈತರಿಗೆ ಬೆಳೆ ವಿಮೆ ಹಣ ಪಾವತಿಸದಿದ್ದರೆ. ನಂತರ ಶೇ.12ರಷ್ಟು ಬಡ್ಡಿ ಸಮೇತ ಪಾವತಿಸಬೇಕು ಎಂದು ರಾಧಾಮೋಹನ್ ಸಿಂಗ್ ಅವರು ಪ್ರಶ್ನೋತ್ತರ ಅವಧಿಯಲ್ಲಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com