ಎನ್ಆರ್ ಸಿಯಿಂದ ಕಾಂಗ್ರೆಸ್, ಬಿಜೆಪಿ ಶಾಸಕರ ಪತ್ನಿಯರೇ ಮಿಸ್ಸಿಂಗ್

ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ ಆರ್ ಸಿ) ನಿನ್ನೆ ಪ್ರಕಟಿಸಿದ ಅಂತಿಮ ಕರಡು ಪ್ರತಿಯಲ್ಲಿ ಅಸ್ಸಾಂನ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ನವದೆಹಲಿ: ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ ಆರ್ ಸಿ) ನಿನ್ನೆ ಪ್ರಕಟಿಸಿದ ಅಂತಿಮ ಕರಡು ಪ್ರತಿಯಲ್ಲಿ ಅಸ್ಸಾಂನ ಹಲವು ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರ ಪತ್ನಿಯರ ಹೆಸರೇ ಇಲ್ಲದಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ.
ಬಿಜೆಪಿ ಶಾಸಕ ದೀಲಿಪ್ ಪೌಲ್ ಅವರ ಪತ್ನಿ ಅರ್ಚನಾ ಪೌಲ್ ಹಾಗೂ ಕಾಂಗ್ರೆಸ್ ಮಾಜಿ ಶಾಸಕ ಅತೂರ್ ರೇಹಮಾನ್ ಮಝಾರ್ಬಿಯಾ ಅವರ ಪತ್ನಿಯ ಹೆಸರು ಸಹ ಎನ್ ಆರ್ ಸಿಯಲ್ಲಿಲ್ಲ.
ಇದು ಅಂತಿಮ ಪಟ್ಟಿಯಲ್ಲ. ಹೀಗಾಗಿ ಯಾರು ಆತಂಕಪಡುವ ಅಗತ್ಯ ಇಲ್ಲ. ನನ್ನ ಪತ್ನಿಯ ಹೆಸರು ಸಹ ಪಟ್ಟಿಯಲ್ಲಿಲ್ಲ. ನನ್ನ ಪತ್ನಿ ಮತ್ತೆ ಅರ್ಜಿ ಸಲ್ಲಿಸುವ ಮೂಲಕ ಪೌರತ್ವ ಪಡೆಯಲು ಅವಕಾಶ ಇದೆ. ನಾವು ಅಂತಿಮ ಎನ್ಆರ್ ಸಿ ಪಟ್ಟಿಗಾಗಿ ಕಾಯಬೇಕು ಎಂದು ಬಿಜೆಪಿ ಶಾಸಕ ಪೌಲ್ ಅವರು ಹೇಳಿದ್ದಾರೆ.
ಈ ಕರಡು ಪ್ರತಿಯಲ್ಲಿ ಸಾಕಷ್ಟು ತಪ್ಪುಗಳಿವೆ. ಇದೇ ಅಂತಿಮ ಅಲ್ಲ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಮತ್ತು ಹೊಸದಾಗಿ ನೋಂದಣಿಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ ಎಂದು ಕರೀಮ್ ಗಂಜ್ ಕಾಂಗ್ರೆಸ್ ಶಾಸಕ ಕಮಲಖ್ಯಾ ಡಿ ಪುರ್ಕಯಾಸ್ತ ಅವರು ತಿಳಿಸಿದ್ದಾರೆ.
ಎನ್ ಆರ್ ಸಿ ನಿನ್ನೆ ಪ್ರಕಟಿಸಿದ ಪಟ್ಟಿಯಲ್ಲಿ ಅಸ್ಸಾಂನ 40 ಲಕ್ಷ ಜನರ ಹೆಸರುಗಳು ಇಲ್ಲದಿರುವುದು, ತೀವ್ರ ಟೀಕೆಗೆ ಕಾರಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com