ನಿಜವಾದ ಭಾರತೀಯರನ್ನು ಎನ್ಆರ್​ಸಿಯಿಂದ ಕೈಬಿಡಲಾಗದು: ಅಮಿತ್ ಶಾ

ಅಸ್ಸಾಂ ನಾಗರಿಕ ರಾಷ್ಟ್ರೀಯ ನೊಂದಣಿ(ಎನ್ಆರ್​ಸಿ) ಅಂತಿಮ ಕರಡು ಪಟ್ಟಿಯಿಂದ ಸುಮಾರು 40 ಲಕ್ಷ ಜನರು ಹೊರಗುಳಿದಿದ್ದು ಇದೇ ವಿಚಾರ ಇದೀಗ ರಾಷ್ಟಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ...
ಅಮಿತ್ ಶಾ
ಅಮಿತ್ ಶಾ
ನವದೆಹಲಿ: ಅಸ್ಸಾಂ ನಾಗರಿಕ ರಾಷ್ಟ್ರೀಯ ನೊಂದಣಿ(ಎನ್ಆರ್​ಸಿ) ಅಂತಿಮ ಕರಡು ಪಟ್ಟಿಯಿಂದ ಸುಮಾರು 40 ಲಕ್ಷ ಜನರು ಹೊರಗುಳಿದಿದ್ದು ಇದೇ ವಿಚಾರ ಇದೀಗ ರಾಷ್ಟಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. 
ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಅಸ್ಸಾಂ ನಾಗರಿಕ ರಾಷ್ಟ್ರೀಯ ನೊಂದಣಿ(ಎನ್ಆರ್​ಸಿ) ಕುರಿತಂತೆ ಯಾರೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಿಜವಾದ ಭಾರತೀಯನ ಹೆಸರನ್ನು ಎನ್ಆರ್​ಸಿಯಿಂದ ತೆಗೆದುಹಾಕುವುದಿಲ್ಲ ಎಂದು ಹೇಳಿದ್ದಾರೆ. 
ಈ ವಿಚಾರವನ್ನು ವಿಪಕ್ಷಗಳು ತಮ್ಮ ರಾಜಕೀಯ ಬೆಳೆ ಬೆಯಿಸಿಕೊಳ್ಳಲು ಬಳಸಿಕೊಳ್ಳುತ್ತಿವೆ. ಎನ್ಆರ್​ಸಿ ವಿಚಾರ ದೇಶದ ಭದ್ರತೆಗೆ ಸಂಬಂಧಪಟ್ಟಿದ್ದು ಎಲ್ಲಾದಕ್ಕಿಂತ ನಮಗೆ ದೇಶದ ಭದ್ರತೆ ಹೆಚ್ಚು ಮುಖ್ಯವಾದದ್ದು ಎಂದು ಅಮಿತ್ ಶಾ ಹೇಳಿದ್ದಾರೆ. 
ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ ಅವರು ಎನ್ಆರ್​ಸಿ ವಿಚಾರ ಕುರಿತಂತೆ ವಿಪಕ್ಷಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕಿದೆ ಎಂದು ಒತ್ತಾಯಿಸಿದರು. 
ಎನ್ಆರ್​ಸಿ ಬಗ್ಗೆ ಯಾವುದೇ ಭಾರತೀಯನು ಚಿಂತಿಸಬೇಕಿಲ್ಲ. ದೇಶದ ಭದ್ರತೆಗೆ ಎನ್ಆರ್​ಸಿ ಪ್ರಮುಖವಾದದ್ದು. ಎನ್ಆರ್​ಸಿ ಕುರಿತಂತೆ ಬಿಜೆಪಿ ನಿಲುವು ಸ್ಪಷ್ಟವಾಗಿದ್ದು ಕಾಂಗ್ರೆಸ್ ಕಾರ್ಯಗತಗೊಳಿಸಲಾಗದ್ದನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಕಾರ್ಯಗತಗೊಳಿಸಲಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com