ಸರ್ಕಾರಿ ಬಂಗಲೆ ಖಾಲಿ ಮಾಡಿದ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ

ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಅವರಿಂದು ತಾವೂ ವಾಸಿಸುತ್ತಿದ್ದ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿದ್ದು, 9 ಮಾಲ್ ಅವಿನ್ಯೂ ಹೊಸ ನಿವಾಸಕ್ಕೆ ಸ್ಥಳಾಂತರ ಮಾಡಿದ್ದಾರೆ.
ಮಾಯಾವತಿಯ ಚಿತ್ರ
ಮಾಯಾವತಿಯ ಚಿತ್ರ

ಲಖನೌ:  ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಅವರಿಂದು  ತಾವೂ ವಾಸಿಸುತ್ತಿದ್ದ  ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿದ್ದು,   9 ಮಾಲ್  ಅವಿನ್ಯೂ ಹೊಸ  ನಿವಾಸಕ್ಕೆ ಸ್ಥಳಾಂತರ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿಗಳು ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ಸುಪ್ರೀಂಕೋರ್ಟ್ ನೀಡಿದ್ದ ಆದೇಶದ ಹಿನ್ನೆಲೆಯಲ್ಲಿ  ಮಾಯಾವತಿ ಸರ್ಕಾರಿ ಬಂಗಲೆ ಯನ್ನು  ಇಂದು ಸಂಜೆ ಖಾಲಿ ಮಾಡಿದ್ದು, ಸರಕು, ಸಾಮಾಗ್ರಿಗಳನ್ನು ಸಾಗಿಸಿದ್ದಾರೆ.

ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಗಳಾದ ಮುಲಾಯಂ ಸಿಂಗ್ ಯಾದವ್,  ಹಾಗೂ ಅಖಿಲೇಶ್ ಯಾದವ್  ಸರ್ಕಾರಿ ಬಂಗಲೆ ಖಾಲಿ ಮಾಡಿದ್ದ ನಂತರ ಮಾಯಾವತಿ ಕೂಡಾ ಖಾಲಿ ಮಾಡಿದ್ದಾರೆ.

13-ಎ ಮಾಲ್ ಅವಿನ್ಯೂ  ನಿವಾಸ ಬಿಎಸ್ ಪಿ ಸ್ಥಾಪಕ ಕಾನ್ಷಿರಾಮ್ ಅವರ ಸ್ಮಾರಕವಾಗಿದ್ದು, ಅದಕ್ಕೆ ಭದ್ರತೆ ಒದಗಿಸುವ  ಜವಾಬ್ದಾರಿ ಸರ್ಕಾರದ್ದಾಗಿದೆ ಎಂದು ಮಾಯಾವತಿ ಹೇಳಿದ್ದಾರೆ.




ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com