1, 2 ನೇ ತರಗತಿ ವಿದ್ಯಾರ್ಥಿಗಳೇ ಇನ್ಮೇಲೆ ಹೋಂ ವರ್ಕ್ ಗೆ ಹೇಳಿ ಗುಡ್ ಬೈ!

ಒಂದನೇ ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಹೋಂ ವರ್ಕ್ ನೀಡುವುದನ್ನು ತಪ್ಪಿಸುವುದಕ್ಕೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ನಿರ್ಧರಿಸಿದ್ದು, ಈ ಸಂಬಂಧ ಸಂಸತ್ ನಲ್ಲಿ ಮಸೂದೆ ಮಂಡಿಸಲಿದೆ.
ಪ್ರಕಾಶ್ ಜಾವ್ಡೇಕರ್
ಪ್ರಕಾಶ್ ಜಾವ್ಡೇಕರ್
ಕೋಲ್ಕತ್ತಾ: ಒಂದನೇ ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಹೋಂ ವರ್ಕ್ ನೀಡುವುದನ್ನು ತಪ್ಪಿಸುವುದಕ್ಕೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ನಿರ್ಧರಿಸಿದ್ದು, ಈ ಸಂಬಂಧ ಸಂಸತ್ ನಲ್ಲಿ ಮಸೂದೆ ಮಂಡಿಸಲಿದೆ. 
ಮಸೂದೆ ಮಂಡನೆ ವಿಷಯವಾಗಿ ಸ್ವತಃ ಹೆಚ್ ಆರ್ ಡಿ ಸಚಿವ ಪ್ರಕಾಶ್ ಜಾವ್ಡೇಕರ್ ಮಾಹಿತಿ ನೀಡಿದ್ದಾರೆ. ಒಂದನೇ ತರಗತಿ ಹಾಗೂ 2 ನೇ ತರಗತಿ ವಿದ್ಯಾರ್ಥಿಗಳ ಶಾಲಾ ಬ್ಯಾಗ್ ಭಾರವನ್ನು ಇಳಿಸಿ, ಹೋಮ್ ವರ್ಕ್ ನೀಡುವುದನ್ನು ರದ್ದುಗೊಳಿಸಲು ಕೇಂದ್ರ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕೆಂದು  ಮದ್ರಾಸ್ ಹೈಕೋರ್ಟ್ ಮೇ.30 ರಂದು ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಪ್ರಕಾಶ್ ಜಾವ್ಡೇಕರ್ ಮಸೂದೆ ಮಂಡನೆ ಮಾಡುವುದಾಗಿ ತಿಳಿಸಿದ್ದಾರೆ. 
ಕೋರ್ಟ್ ತೀರ್ಪನ್ನು ನಾವು ಸ್ವಾಗತಿಸುತ್ತೇವೆ, ಕೋರ್ಟ್ ಆದೇಶವನ್ನು ನಾವು ಅಧ್ಯಯನ ಮಾಡುತ್ತಿದ್ದೇವೆ. 2009 ರ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆಯ ಅನುಸಾರವಾಗಿ, ಮಕ್ಕಳಿಗೆ ಹೊರೆಯಾಗದಂತೆ ಮಾಡುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಜಾವ್ಡೇಕರ್ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com