ಸೈಕಲ್ ಸವಾರಿಯನ್ನು ಹೆಚ್ಚು ಉತ್ತೇಜಿಸಬೇಕು: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಉತ್ತಮವಾಗಿರುವ, ಅಗ್ಗವಾಗಿರುವ ಸೈಕ್ಲಿಂಗ್ ಗೆ ಹೆಚ್ಚು ಉತ್ತೇಜನ ನೀಡುವುದು ಅಗತ್ಯವೆಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಸೈಕಲ್ ಸವಾರಿಯನ್ನು ಹೆಚ್ಚು ಉತ್ತೇಜಿಸಬೇಕು: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು
ಸೈಕಲ್ ಸವಾರಿಯನ್ನು ಹೆಚ್ಚು ಉತ್ತೇಜಿಸಬೇಕು: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು
ನವದೆಹಲಿ: ಉತ್ತಮವಾಗಿರುವ, ಅಗ್ಗವಾಗಿರುವ ಸೈಕ್ಲಿಂಗ್ ಗೆ ಹೆಚ್ಚು ಉತ್ತೇಜನ ನೀಡುವುದು ಅಗತ್ಯವೆಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ. 
ಅಗ್ಗದ ದರದಲ್ಲಿ ಉತ್ತಮ ವ್ಯಾಯಾಮ ಸಾಧ್ಯವಾದರೆ ಅದು ಸೈಕ್ಲಿಂಗ್ ನಿಂದ. ಸೈಕಲ್ ಸವಾರಿ, ಸೈಕಲ್ ಸಾರಿಗೆಯನ್ನು ಉತ್ತೇಜಿಸಬೇಕು ಎಂದು ಉಪರಾಷ್ಟ್ರಪತಿಗಳು ಅಭಿಪ್ರಾಯಪಟ್ಟಿದ್ದಾರೆ. 
ವಿಶ್ವ ಸೈಕ್ಲಿಂಗ್ ದಿನದ ಅಂಗವಾಗಿ ದೆಹಲಿ ಪುರಸಭೆ (ಎನ್ ಡಿಎಂಸಿ) ಪ್ರದೇಶದಲ್ಲಿ ಸ್ಮಾರ್ಟ್ ಸೈಕಲ್ ಸ್ಟೇಷನ್ ನ್ನು ಉದ್ಘಾಟಿಸಿ ಮಾತನಾಡಿರುವ ವೆಂಕಯ್ಯ ನಾಯ್ಡು, ದೇಶದ ಬೇರೆ ಪ್ರಾಂತ್ಯಗಳಲ್ಲಿಯೂ ಇಂತಹ ಕ್ರಮಗಳು ಅಗತ್ಯ ಎಂದು ಹೇಳಿದ್ದಾರೆ.
ಇದೇ ವೇಳೆ ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣದ ಬಗ್ಗೆಯೂ ಮಾತನಾಡಿರುವ ವೆಂಕಯ್ಯ ನಾಯ್ಡು, ವಿಶ್ವವನ್ನು ನಾವು ಅಕ್ಷರಸಹ ಚಿಮಣಿಯನ್ನಾಗಿಸಿದ್ದೇವೆ, ನಗರ ಪ್ರದೇಶಗಳಲ್ಲಿ ಸೈಕ್ಲಿಂಗ್ ನ್ನು ಉತ್ತೇಜಿಸುವುದಕ್ಕೆ ಇದು ಸೂಕ್ತ ಸಮಯ ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com