ಬಿಹಾರ ಎನ್ ಡಿಎ ಸಭೆಗೂ ಮುನ್ನ ಜೆಡಿಯು ನಾಯಕರ ಸಭೆ: ಕುತೂಹಲ ಮೂಡಿಸಿದ ನಿತೀಶ್ ನಡೆ

ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವುದಕ್ಕೆ ಸಂಬಂಧಿಸಿದಂತೆ ಕೇಂದ್ರದೊಂದಿಗಿನ ಹಗ್ಗ-ಜಗ್ಗಾಟದಿಂದ ನಿತೀಶ್ ಕುಮಾರ್ ಬಿಜೆಪಿ ನಡುವಿನ ಎಲ್ಲವೂ ಸರಿ ಇಲ್ಲ ಎಂಬ ಊಹಾಪೋಹಕ್ಕೆ ಕಾರಣವಾಗಿತ್ತು.
ನಿತೀಶ್ ಕುಮಾರ್
ನಿತೀಶ್ ಕುಮಾರ್
ಪಾಟ್ನಾ: ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವುದಕ್ಕೆ ಸಂಬಂಧಿಸಿದಂತೆ ಕೇಂದ್ರದೊಂದಿಗಿನ ಹಗ್ಗ-ಜಗ್ಗಾಟದಿಂದ ನಿತೀಶ್ ಕುಮಾರ್ ಬಿಜೆಪಿ ನಡುವಿನ ಎಲ್ಲವೂ ಸರಿ ಇಲ್ಲ ಎಂಬ ಊಹಾಪೋಹಕ್ಕೆ ಕಾರಣವಾಗಿತ್ತು. ಇದಕ್ಕೆ ಪೂರಕವೆಂಬಂತೆ ಬಿಹಾರದಲ್ಲಿ ಮತ್ತೊಂದು ಬೆಳವಣಿಗೆ ನಡೆದಿದೆ. 
ಬಿಹಾರ ಎನ್ ಡಿಎ ಸಭೆಗೂ ಮುನ್ನ ನಿತೀಶ್ ಕುಮಾರ್ ಸಭೆ ನಡೆಸಿದ್ದಾರೆ. ಜೂ.07 ರಂದು ಎನ್ ಡಿಎ ಸಭೆ ನಡೆಯಲಿದ್ದು ಇದಕ್ಕೂ ಮುನ್ನವೇ ನಿತೀಶ್ ಕುಮಾರ್ ಜೆಡಿಯು ಪಕ್ಷದ ಸಭೆ ನಡೆಸಿರುವುದು ಮಹತ್ವ ಪಡೆದುಕೊಂಡಿದೆ. ಸಭೆಯಲ್ಲಿ ಜೆಡಿಯು ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಪವನ್ ವರ್ಮ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ ತ್ಯಾಗಿ ಭಾಗಿಯಾಗಿದ್ದರು.
ಇದೇ ಸಭೆಯಲ್ಲಿ ಜೋಕಿತ್ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಅಭ್ಯರ್ಥಿಯ ಸೋಲಿಬ ಬಗ್ಗೆಯೂ ಚರ್ಚೆ ನಡೆಸಲಾಯಿತು. ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಸೋಲಿಗೆ ಏರಿಕೆಯಾಗುತ್ತಿರುವ ಪೆಟ್ರೋಲ್, ಡಿಸೆಲ್ ದರ ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. 
ಇನ್ನು ಎನ್ ಡಿಎ ಜೊತೆ ಇರುವ ಆರ್ ಎಲ್ ಎಸ್ ಪಿ ಪಕ್ಷದ ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ ಸಹ ಬಿಜೆಪಿ  ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಎನ್ ಡಿಎ ಮಿತ್ರಪಕ್ಷಗಳ ನಡುವೆ ಸಹಕಾರ ಇಲ್ಲ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com