ಬಜೆಟ್ ನಿರ್ಬಂಧ: ಭಾರತೀಯ ಸೇನೆಯಿಂದ ಅಗತ್ಯ ರೈಫಲ್ಸ್ ಖರೀದಿಯಲ್ಲಿ ಭಾರೀ ಕಡಿತ!

ಭಾರತೀಯ ಸೇನೆ ತನ್ನ ನೈಜ ಆಗತ್ಯಕ್ಕಿತ ಮೂರನೇ ಒಂದು ಭಾಗದಷ್ಟು ಮಾತ್ರವೇ ಆಧುನಿಕ ಶಸ್ತ್ರಾಸ್ತ್ರಗಳ ಖರೀದಿಗೆ ನಿರ್ಧರಿಸಿದೆ.
ಬಜೆಟ್ ನಿರ್ಬಂಧ:  ಭಾರತೀಯ ಸೇನೆಯಿಂದ  ಅಗತ್ಯ ರೈಫಲ್ಸ್ ಖರೀದಿಯಲ್ಲಿ ಭಾರೀ ಕಡಿತ!
ಬಜೆಟ್ ನಿರ್ಬಂಧ: ಭಾರತೀಯ ಸೇನೆಯಿಂದ ಅಗತ್ಯ ರೈಫಲ್ಸ್ ಖರೀದಿಯಲ್ಲಿ ಭಾರೀ ಕಡಿತ!
Updated on
ನವದೆಹಲಿ: ಭಾರತೀಯ ಸೇನೆ ತನ್ನ ನೈಜ  ಆಗತ್ಯಕ್ಕಿತ ಮೂರನೇ ಒಂದು ಭಾಗದಷ್ಟು ಮಾತ್ರವೇ ಆಧುನಿಕ ಶಸ್ತ್ರಾಸ್ತ್ರಗಳ ಖರೀದಿಗೆ ನಿರ್ಧರಿಸಿದೆ. ಭಾರತೀಯ ಸೇನೆಯು ಕೇವಲ 2.5 ಲಕ್ಷ ರೈಫಲ್ಸ್ ಖರೀದಿಸಲು ಮುಂದಾಗಿದ್ದು ಬಜೆಟ್ ನಿರ್ಬಂಧಗಳಿಂದಾಗಿ  ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಬಲ್ಲ ಮೂಲಗಳು ಹೇಳಿದೆ.
1.3 ದಶಲಕ್ಷ ಸೈನಿಕರಿರುವ ಬೃಹತ್ ಸೇನೆಗೆ 8 ಲಕ್ಷ ಆಧುನಿಕ ರೈಫಲ್ಸ್ ಅಗತ್ಯವಿದೆ. ಇದಕ್ಕಾಗಿ 2.5 ಬಿಲಿಯನ್ ಡಾಲರ್ ವೆಚ್ಚವಾಗಲಿದೆ.ಆದರೆ ಖರ್ಚಿನ ಮಿತಿ ನೆಪ ಹೇಳಿ ಕೇವಲ   2.5 ಲಕ್ಷ ರೈಫಲ್ಸ್ ಖರೀದಿಸಲು ನಿರ್ಧರಿಸಿದ್ದಾರೆಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ವ್ಯಕ್ತಿ ಹೇಳಿದ್ದಾರೆ.
ಭಾರತ ರಕ್ಷಣಾ ಪಡೆಯಲ್ಲಿ ಒಟ್ಟು 450,000 ಸೈನಿಕರಿದ್ದು ಇವರಲ್ಲಿ ಕೇವಲ ಅರ್ಧದಷ್ಟು  ಮಂದಿ ಮಾತ್ರ ಯುದ್ಧಭೂಮಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಇವರು ರೈಫಲ್ ಅನ್ನು ಅವರ ಪ್ರಾಥಮಿಕ ಅಸ್ತ್ರವಾಗಿ ಬಳಸಿಕೊಳ್ಳುತ್ತಾರೆ. ಉಳಿದವರೆಲ್ಲಾ ಅವರಿಗೆ ಬೆಂಬಲ ನೀಡುತ್ತಾರೆ ಎಂದು ಅವರು ಹೇಳಿದ್ದಾರೆ.
ಕಾಶ್ಮೀರ ಮತ್ತು ಈಶಾನ್ಯ ಗಡಿಗಳಲ್ಲಿ ಸೇನಾಪಡೆಗಳು ಸತತವಾಗಿ ಮಾರಣಾಂತಿಕ ದಾಳಿಯನ್ನು ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸೇನಾಪಡೆಗಳನ್ನು ಆಧುನೀಕರಿಸುವ ಸಲುವಾಗಿ 250 ಶತಕೋಟಿ ಡಾಲರ್ ಮೊತ್ತವನ್ನು ಮೀಸಲಿರಿಸಿದ್ದಾರೆ. ಇದರೊಡನೆ ತಮ್ಮ ಮಹತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾ ಮೂಲಕ ಸ್ಥಳೀಯವಾಗಿ ಶಸ್ತ್ರಾಸ್ತ್ರ ಸಲಕರಣೆಗಳನ್ನು ಅಭಿವೃದ್ದಿಪಡಿಸಲು ಉತ್ತೇಜಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com