12 ಗಂಟೆಯೊಳಗೆ ನಿಪಾ ವೈರಾಸ್ ನಿಯಂತ್ರಣ- ಜೆ. ಪಿ. ನಡ್ಡಾ

ಕಳೆದ ತಿಂಗಳು ಕೇರಳದಲ್ಲಿ ಮರಣ ಮೃದಂಗ ಬಾರಿಸಿದ್ದ ನಿಪಾ ವೈರಸ್ ನಿಯಂತ್ರಣಕ್ಕೆ ಬಂದಿರುವುದಾಗಿ ಕೇಂದ್ರ ಆರೋಗ್ಯ ಸಚಿವ ಜೆ. ಪಿ. ನಡ್ಡಾ ಹೇಳಿದ್ದಾರೆ.
ಜೆ. ಪಿ. ನಡ್ಡಾ
ಜೆ. ಪಿ. ನಡ್ಡಾ

ನವದೆಹಲಿ: ಕಳೆದ ತಿಂಗಳು ಕೇರಳದಲ್ಲಿ ಮರಣ ಮೃದಂಗ ಬಾರಿಸಿದ್ದ ನಿಪಾ  ವೈರಸ್ ನಿಯಂತ್ರಣಕ್ಕೆ ಬಂದಿರುವುದಾಗಿ ಕೇಂದ್ರ  ಆರೋಗ್ಯ ಸಚಿವ ಜೆ. ಪಿ. ನಡ್ಡಾ ಹೇಳಿದ್ದಾರೆ.

ನಿಪಾ ವೈರಸ್ ಕಾಣಿಸಿಕೊಂಡ 12 ಗಂಟೆಯೊಳಗೆ  ಡಾಕ್ಟರ್ ಗಳನ್ನೊಳಗೊಂಡ ತಂಡ ಕೇರಳಕ್ಕೆ ತಲುಪಿ ಸೋಂಕು ನಿಯಂತ್ರಣದ ಬಗ್ಗೆ ಚರ್ಚಿಸಿ, ಕಾಲಮಿತಿಯೊಳಗೆ   ನಿಯಂತ್ರಣಕ್ಕೆ ತಂದಿದ್ದಾರೆ.  ಪರಿಸ್ಥಿತಿಯನ್ನು ತಾವೇ  ಖುದ್ದು ಮೇಲ್ವಿಚಾರಣೆ ನಡೆಸಿದ್ದು, ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಹವಾಮಾನ ವೈಫರೀತ್ಯದಿಂದಾಗಿ ನಿಪಾ ಸೋಂಕು ಕಾಣಿಸಿಕೊಂಡಿದ್ದು, ಇದರ ನಿವಾರಣೆಗಾಗಿ  ಏಮ್ಸ್ ಆಸ್ಪತ್ರೆಯ  ವಿಜ್ಞಾನಿಗಳು, ಸಪ್ಧರ್  ಜಂಗ್ ಆಸ್ಪತ್ರೆ, ಹಾಗೂ ರಾಷ್ಟ್ರೀಯ ರೋಗ ನಿಯಂತ್ರಣ ಮಂಡಳಿ ವೈದ್ಯರು   ಅಗತ್ಯ ಬೆಂಬಲ ನೀಡಿರುವುದಾಗಿ ಅವರು ಹೇಳಿದ್ದಾರೆ.

 ಕಳೆದ ತಿಂಗಳು ಕೇರಳದಲ್ಲಿ ಕಾಣಿಸಿಕೊಂಡಿದ್ದ ನಿಪಾ ವೈರಸ್ ನಿಂದಾಗಿ  ಸುಮಾರು 16 ಮಂದಿ ಸಾವನ್ನಪ್ಪಿದ್ದರು. ಮುಂಜಾಗ್ರತಾ ಕ್ರಮವಾಗಿ  ಜೂನ್ 12 ರವರೆಗೂ ಕೊಝಿಕೋಡುವಿನಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

 ಕೊಝಿಕೋಡು, ಮಲ್ಲಪುರಂ,  ವೈನಾಡು,  ಕಣ್ಣೂರು ಜಿಲ್ಲೆಗಳಿಗೆ  ತೆರಳುವ ಪ್ರಯಾಣಿಕರು ವಿಶೇಷ ಮುಂಜಾಗ್ರತೆ ವಹಿಸುವಂತೆ   ಕೇರಳ  ಆರೋಗ್ಯ ಇಲಾಖೆ ಸಲಹೆ ನೀಡಿದೆ.  ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಮಾನವ ಹಾಗೂ ಪ್ರಾಣಿಗಳಿಂದ ಈ ಸೋಂಕು ಹರಡಿ,  ಜ್ವರ, ತಲೆನೋವು, ಉಸಿರಾಟ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ನಂತರ  ಕೋಮ ಸ್ಥಿತಿಗೆ ತಲುಪಿ ಮನುಷ್ಯ ಸಾಯಲೂಬಹುದು.



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com