ಎಫ್ ಐ ಆರ್ ದಾಖಲಿಸಿಲ್ಲ, ನನ್ನ ವಿರುದ್ಧ ಇನ್ನೂ ತನಿಖೆ : ಇಡಿ ವಿಚಾರಣೆಗೆ ಚಿದಂಬರಂ ಹೇಳಿಕೆ

ಏರ್ ಸೆಲ್ - ಮ್ಯಾಕ್ಸಿಸ್ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಇಂದು ಹಿರಿಯ ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಅವರನ್ನು ವಿಚಾರಣೆ ನಡೆಸಿದೆ
ಚಿದಂಬರಂ
ಚಿದಂಬರಂ

ನವದೆಹಲಿ: ಏರ್ ಸೆಲ್ - ಮ್ಯಾಕ್ಸಿಸ್ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಜಾರಿ ನಿರ್ದೇಶನಾಲಯ ಇಂದು ಹಿರಿಯ ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಅವರನ್ನು  ವಿಚಾರಣೆ ನಡೆಸಿದ್ದು, ತನಿಖಾ ದಳಕ್ಕೆ ಎಲ್ಲಾ ಉತ್ತರವನ್ನು  ನೀಡಿದ್ದಾರೆ. ಸರ್ಕಾರದ ದಾಖಲೆಗಳಲ್ಲಿ ಅದು ಈಗಾಗಲೇ ದಾಖಲಾಗಿದೆ.

ತಮ್ಮ ವಿರುದ್ಧ ಎಫ್ ಐಆರ್ ದಾಖಲಿಸಿಲ್ಲ. ಆದರೂ  ಉದ್ದೇಶಪೂರ್ವಕವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಚಿದಂಬರಂ ಆರೋಪಿಸಿದ್ದಾರೆ.


ಆರು ಗಂಟೆಗಳ ಕಾಲ ಜಾರಿ ನಿರ್ದೇಶನಾಲಯ  ವಿಚಾರಣೆ ನಡೆಸಿದೆ. ಅದರಲ್ಲಿ ಅರ್ಧಕ್ಕೂ ಹೆಚ್ಚು ಸಮಯವನ್ನು  ದೋಷವಿಲ್ಲದೆ ಉತ್ತರ ಟೈಪ್ ಮಾಡಲು, ಹೇಳಿಕೆ ಓದಲು ಹಾಗೂ ಪಠಣ ಮಾಡಲು  ತೆಗೆದುಕೊಳ್ಳಲಾಗಿದೆ ಎಂದು ಚಿದಂಬರಂ ಹೇಳಿದ್ದಾರೆ.

 ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ  ಜಾರಿ ನಿರ್ದೇಶನಾಲಯ ಇಂದು ಚಿದಂಬರಂ ಅವರ ಹೇಳಿಕೆಯನ್ನು ದಾಖಲು ಮಾಡಿಕೊಂಡಿದೆ.

3, 500 ಕೋಟಿ ಮೊತ್ತದ ಏರ್ ಸೆಲ್- ಮ್ಯಾಕ್ಸಿಲ್  ಒಪ್ಪಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಕಾರ್ತಿ ಚಿದಂಬರಂ ಅವರನ್ನು ವಿಚಾರಣೆಗೆ ಒಳಪಡಿಸಿದ ನಂತರ ಚಿದಂಬರಂ ಅವರ ಪಾತ್ರ ಕೇಳಿಬಂದಿತ್ತು.

ಜಾರಿನಿರ್ದೇಶನಾಲಯದಿಂದ ಬಂಧನದಿಂದ ಪಾರು ಮಾಡುವಂತೆ ಕಳೆದ ವಾರ ಚಿದಂಬರಂ   ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಒ ಪಿ ಸೈನಿ ಬಳಿ ಮನವಿ ಮಾಡಿಕೊಂಡಿದ್ದರು.  ಜುಲೈ 10 ರವೆರೆಗೂ  ಅವರನ್ನು ಬಂಧಿಸದಂತೆ  ಇದೇ ನ್ಯಾಯಾಲಯ ಇಂದು ಇಡಿಗೆ ನಿರ್ದೇಶನ  ನಿರ್ದೇಶಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com