ಇನ್ನುಮುಂದೆ ರೈಲಿನಲ್ಲಿ ಹೆಚ್ಚುವರಿ ಲಗೇಜ್ ತಂದರೆ ಆರು ಪಟ್ಟು ದಂಡ!

ಭಾರತೀಯ ರೈಲ್ವೆ ಪ್ರಯಾಣಿಕರಿಗೊಂದು ಶಾಕಿಂಗ್ ಸುದ್ದಿ ನೀಡಿದ್ದು, ಇನ್ನುಮುಂದೆ ವಿಮಾನ ಪ್ರಯಾಣದ ರೀತಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಭಾರತೀಯ ರೈಲ್ವೆ ಪ್ರಯಾಣಿಕರಿಗೊಂದು ಶಾಕಿಂಗ್ ಸುದ್ದಿ ನೀಡಿದ್ದು, ಇನ್ನುಮುಂದೆ ವಿಮಾನ ಪ್ರಯಾಣದ ರೀತಿ ರೈಲ್ವೆಯಲ್ಲೂ ಹೆಚ್ಚುವರಿ ಲಗೇಜ್ ಕೊಂಡೊಯ್ಯುವ ಮುನ್ನ ಎಚ್ಚರಿಕೆ ವಹಿಸಿ.
ಬೋಗಿಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಲಗೇಜ್ ಸಾಗಿಸಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ತನ್ನ ಮೂರು ದಶಕಗಳಷ್ಟು ಹಳೆಯದಾದ ಲಗೇಜ್ ನಿಯಮಗಳನ್ನು ಕಟ್ಟು ನಿಟ್ಟಿನಿಂದ ಜಾರಿಗೊಳಿಸಲು ನಿರ್ಧರಿಸಿದೆ.
ಇನ್ನುಮುಂದೆ ಪ್ರಯಾಣಿಕರ ಬಳಿ ಹೆಚ್ಚುವರಿ ಲಗೇಜ್ ಪತ್ತೆಯಾದರೆ ಆರು ಪಟ್ಟು ದಂಡ ವಿಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿಯಮಗಳ ಪ್ರಕಾರ, ಸ್ಲೀಪರ್ ದರ್ಜೆ ಪ್ರಯಾಣಿಕರು 40 ಕೆಜಿ ಮತ್ತು ದ್ವಿತಿಯ ದರ್ಜೆ ಪ್ರಯಾಣಿಕರು 35 ಕೆಜಿ ತೂಕದ ಲಗೇಜ್ ಅನ್ನು ಉಚಿತವಾಗಿ ಕೊಂಡೊಯ್ಯಬಹುದಾಗಿದೆ. ಹಣಪಾವತಿಸಿ ಗರಿಷ್ಠ 80 ಕೆಜಿ ಹಾಗೂ 70 ಕೆಜಿ ಲಗೇಜ್ ಕೊಂಡೊಯ್ಯಲು ಅವಕಾಶವಿದೆ. 
ಮೊದಲಿನಿಂದಲೂ ಈ ನಿಯಮಗಳು ಇವೆ. ಆದರೆ ಈಗ ಅದನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ. ಪ್ರಯಾಣಿಕರ ಬಳಿ ಹಣ ಪಾವತಿಸಿದ 40ಕೆಜಿಗೂ ಹೆಚ್ಚಿನ ಲಗೇಜ್ ಪತ್ತೆಯಾದರೆ ಅದರ ಆರು ಪಟ್ಟು ದಂಡ ವಿಧಿಸಲಾಗುವುದು ಎಂದು ರೈಲ್ವೆ ಮಂಡಳಿಯ ಮಾಹಿತಿ ಮತ್ತು ಪ್ರಚಾರ ನಿರ್ದೇಶಕ ವೇದ್ ಪ್ರಕಾಶ್ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com