ಹಾರ್ಲಿಕ್ಸ್ ಬ್ರಾಂಡ್ ಅಂಬಾಸಿಡರ್ ಆಗ್ಬೇಡಿ ಅಂತ ಬಚ್ಚನ್ ಗೆ ಸಾರ್ವಜನಿಕ ಆರೋಗ್ಯ ತಜ್ಞರು ಹೇಳಿದ್ದೇಕೆ ಗೊತ್ತೇ?

ಆರೋಗ್ಯ ತಜ್ಞರು ಹಾರ್ಲಿಕ್ಸ್ ನಿಂದ ಅಂತರ ಕಾಯ್ದುಕೊಳ್ಳುವಂತೆ ಬಚ್ಚನ್ ಗೆ ಸಲಹೆ ನೀಡಿದ್ದಾರೆ.
ಅಮಿತಾಬ್ ಬಚ್ಚನ್
ಅಮಿತಾಬ್ ಬಚ್ಚನ್
ನವದೆಹಲಿ: ಕೇಂದ್ರ ಸರ್ಕಾರದ ರಾಷ್ಟ್ರೀಯ ಪೋಷಣ್ ಮಿಷನ್ ನ್ನು ಬೆಂಬಲಿಸಿ ಹಾರ್ಲಿಕ್ಸ್ ಕೈಗೊಂಡಿದ್ದ ಅಭಿಯಾನಕ್ಕೆ ಇತ್ತೀಚೆಗಷ್ಟೇ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದರು. ಆದರೆ ಈ ಬೆನ್ನಲ್ಲೆ ಆರೋಗ್ಯ ತಜ್ಞರು ಹಾರ್ಲಿಕ್ಸ್ ನಿಂದ ಅಂತರ ಕಾಯ್ದುಕೊಳ್ಳುವಂತೆ ಬಚ್ಚನ್ ಗೆ ಸಲಹೆ ನೀಡಿದ್ದಾರೆ. 
ಸಿಹಿಯಾದ ಉತ್ಪನ್ನದ ಮಿಶ್ರಣ ಕುಪೋಷಣೆ ನಿವಾರಣೆಗೆ ಸಹಕಾರಿ ಎಂಬುದು ಕಟ್ಟುಕಥೆ ಎಂದು ಆರೋಗ್ಯ ತಜ್ಞರು ಹೇಳಿದ್ದು, ಹಾರ್ಲಿಕ್ಸ್ ಅಭಿಯಾನಕ್ಕೆ ಬ್ರಾಂಡ್ ಅಂಬಾಸಿಡರ್ ಆಗುವುದಕ್ಕೆ ಬಚ್ಚನ್ ಒಪ್ಪಿಕೊಂಡಿರುವುದನ್ನು ಅಘಾತಕಾರಿ ಬೆಳವಣಿಗೆ ಎಂದು ಹೇಳಿದ್ದಾರೆ. 
ಹಾರ್ಲಿಕ್ಸ್ ಹೆಚ್ಚು ಸಿಹಿಯನ್ನು ಹೊಂದಿರುವ ಮಿಶ್ರಣ, 100 ಗ್ರಾಂ ಹಾರ್ಲಿಕ್ಸ್ ನಲ್ಲಿ 78 ಗ್ರಾಂ ಕಾರ್ಬೋಹೈಡ್ರೇಟ್ಗಳು ಹಾಗೂ 32 ಗ್ರಾಮ್ ನಷ್ಟು ಸುಕ್ರೋಸ್ ಸಕ್ಕರೆ ಇರುತ್ತದೆ ಎಂದು ಹಾರ್ಲಿಕ್ಸ್ ಉತ್ಪನ್ನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿ ಅಮಿತಾಬ್ ಬಚ್ಚನ್ ಅವರಿಗೆ ಕಳಿಸಲಾಗಿರುವ ಪತ್ರದಲ್ಲಿ ತಿಳಿಸಲಾಗಿದೆ. 
ಸರ್ಕಾರದ ಅಭಿಯಾನಕ್ಕೆ ಬೆಂಬಲ ನೀಡಿ ಬ್ರಾಂಡ್ ಅಂಬಾಸಿಡರ್ ನ್ನು ನೇಮಕ ಮಾಡುವುದು ಹಿತಾಸಕ್ತಿಯ ಸಂಘರ್ಷಕ್ಕೆ ಕಾರಣವಾಗಿ ಬ್ರಾಂಡ್ ಬಿಲ್ಡಿಂಗ್ ಗೆ ಸಂಬಂಧಿಸಿದಂತೆ ದೀರ್ಘಾವಧಿಯ ಪರಿಣಾಮಗಳನ್ನು ಹೊಂದಿರುತ್ತದೆ ಎಂದು ಎನ್ಎಪಿಐ ನ ಸಂಚಾಲಕ ಅರುಣ್ ಗುಪ್ತಾ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಹೇಳಿದ್ದಾರೆ.
ಮಕ್ಕಳಲ್ಲಿ ಹಾರ್ಲಿಕ್ಸ್ ನಂತಹ ಸುಕ್ರೋಸ್ ಸಕ್ಕರೆ ಹೆಚ್ಚಿರುವ ಮಿಶ್ರಣಗಳು ಬೊಜ್ಜು ಹೆಚ್ಚಿಸುತ್ತದೆ ಅಷ್ಟೇ ಅಲ್ಲದೇ ದೀರ್ಘಾವಧಿಯಲ್ಲಿ ಸಾಂಕ್ರಾಮಿಕೇತರ ರೋಗಗಳು ಉಂಟಾಗುವಂತೆ ಮಾಡುತ್ತದೆ.  ಒಟ್ಟಾರೆ ಸೇವಿಸಲ್ಪಡುವ ಎನರ್ಜಿಗಿಂತಲೂ ಶೇ.10 ರಷ್ಟು ಕಡಿಮೆ ಸುಕ್ರೋಸ್ ಸಕ್ಕರೆ ಅಂಶಗಳನ್ನು ಸೇವಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಸಹ ಹೇಳುತ್ತದೆ ಇದು ನಿಮ್ಮ ಅರಿವಿನಲ್ಲಿದೆ ಎಂದು ಭಾವಿಸುತ್ತೇವೆ ಎಂದು ಆರೋಗ್ಯ ತಜ್ಞರು ಅಮಿತಾಬ್ ಬಚ್ಚನ್ ಗೆ ಹೇಳಿದ್ದಾರೆ. 
ಅಷ್ಟೇ ಅಲ್ಲದೇ ಹಾರ್ಲಿಕ್ಸ್ ದುಬಾರಿ ಉತ್ಪನ್ನವಾಗಿದ್ದು, ಇದನ್ನು ನೀವು ಪ್ರೊಮೋಟ್ ಮಾಡಿದರೆ ಮಧ್ಯಮ, ಬಡಕುಟುಂಬಗಳ ಜೇಬಿಗೆ ಮತ್ತಷ್ಟು ಹೊರೆಯಾಗಲಿವೆ ಎಂದು ನವದೆಹಲಿಊಯ ಆರ್ ಎಂಎಲ್ ಆಸ್ಪತ್ರೆಯ  ಆರತಿ ಮಾರಿಯಾ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com