ಎಸ್ ಸಿ/ಎಸ್ ಟಿ ನೌಕರರ ಭಡ್ತಿ ಮೀಸಲಾತಿಗೆ ಸುಪ್ರೀಂ ಅಸ್ತು

ಕಾನೂನಿನ ಪ್ರಕಾರ ಎಸ್ ಸಿ/ಎಸ್ ಟಿ ನೌಕರರಿಗೆ ಭಡ್ತಿ ನೀಡಲು ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ...
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ನವದೆಹಲಿ: ಕಾನೂನಿನ ಪ್ರಕಾರ ಎಸ್ ಸಿ/ಎಸ್ ಟಿ ನೌಕರರಿಗೆ ಭಡ್ತಿ ನೀಡಲು ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಿದೆ.
ಬೇರೆ ಬೇರೆ ಹೈಕೋರ್ಟ್‌ಗಳ ಆದೇಶ ಮತ್ತು ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಭಡ್ತಿ ಪ್ರಕ್ರಿಯೆ ನಿಂತು ಹೋಗಿದೆ. ಆದರೆ ನಾವು ನಮ್ಮ ನೌಕರರಿಗೆ ಭಡ್ತಿ ನೀಡಬೇಕಾಗಿದೆ. ಹೀಗಾಗಿ ಭಡ್ತಿ ನೀಡಲು ಅನುಮತಿ ನೀಡಬೇಕು ಎಂದು ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಆದಾರ್ಶ್ ಕುಮಾರ್ ಗೋಯಲ್ ಹಾಗೂ ಅಶೋಕ್ ಭೂಷಣ್ ಅವರನ್ನೊಳಗೊಂಡ ರಜಾ ಪೀಠ, ಮೀಸಲು ವಿಷಯವನ್ನು ಸಾಂವಿಧಾನಿಕ ಪೀಠ ತೀರ್ಮಾನಿಸುವವರೆಗೆ ಎಸ್ ಸಿ/ಎಸ್ ಟಿ ನೌಕರರ ಭಡ್ತಿ ಕೋಟಾ ಅನುಸರಿಸುವುದಕ್ಕೆ ಅನುಮತಿ ನೀಡಿದೆ. 
ಎಸ್ ಸಿ/ಎಸ್ ಟಿ ಭಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ದೆಹಲಿ, ಬಾಂಬೆ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಗಳು ಪ್ರತ್ಯೇಕವಾದ ತೀರ್ಪುಗಳನ್ನು ನೀಡಿವೆ. ಅಲ್ಲದೆ ಸುಪ್ರೀಂ ಕೋರ್ಟ್ ಸಹ ಈ ಸಂಬಂಧ ವಿಭಿನ್ನ ಆದೇಶ ನೀಡಿದೆ ಎಂದು ಕೇಂದ್ರ ಸರ್ಕಾರ ವಾದಿಸಿತು.
ಕೇಂದ್ರದ ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್‌, ಕಾನೂನಿನ ಪ್ರಕಾರ ಎಸ್ ಸಿ/ಎಸ್‌ಟಿ ನೌಕರರಿಗೆ ಭಡ್ತಿಯಲ್ಲಿ ಮೀಸಲಾತಿ ಕಲ್ಪಿಸುವುದಕ್ಕೆ ಅನುಮತಿ ನೀಡಿದೆ. ಆದರೆ ಈ ವಿಚಾರದಲ್ಲಿ ಯಾವ ಕಾನೂನನ್ನು ಅನುಸರಿಸಬೇಕೆಂಬುದನ್ನು ಮಾತ್ರ ಅದು ಸ್ಪಷ್ಟಪಡಿಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com