ನಾಗ್ಪುರ: ದೇಶಾದ್ಯಂತ ಬಹು ಚರ್ಚೆಗೆ ಗ್ರಾಸವಾಗಿದ್ದ ರಾಷ್ಟ್ರೀಯ ಸ್ವಯಂ ಸೇವಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಾಗ್ಪುರಕ್ಕೆ ತಲುಪಿಸಿದ್ದಾರೆ.
ಜೂ.07 ರಂದು ಆರ್ ಎಸ್ಎಸ್ ಕೇಂದ್ರ ಶಾಖೆಯಲ್ಲಿ ಆರ್ ಎಸ್ಎಸ್ ನ ಸಂಘ್ ಶಿಕ್ಷಾ ವರ್ಗ್ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಮಾಜಿ ರಾಷ್ಟ್ರಪತಿಗಳೂ, ಕಾಂಗ್ರೆಸ್ ನ ನಾಯಕರೂ ಆಗಿದ್ದ ಪ್ರಣಬ್ ಮುಖರ್ಜಿ ಭಾಗವಹಿಸುತ್ತಿರುವುದು ಸೈದ್ಧಾಂತಿಕ ಕಾರಣಗಳಿಂದಾಗಿ ತೀವ್ರ ಚರ್ಚೆಯಾಗಿತ್ತು.
ಜಾತ್ಯಾತೀತತೆಯ ಕಾರಣಗಳಿಂದಾಗಿ ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಭಾಗಿಯಾಗದಂತೆ ಕಾಂಗ್ರೆಸ್ ನಾಯಕರು ಪ್ರಣಬ್ ಮುಖರ್ಜಿ ಅವರಿಗೆ ಮನವಿ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮುಖರ್ಜಿ ತಾವು ಆರ್ ಎಸ್ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದಕ್ಕೆ ವ್ಯಕ್ತವಾದ ಆಕ್ಷೇಪಕ್ಕೆ ನಾಗ್ಪುರದಲ್ಲೇ ಉತ್ತರಿಸುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ನಾಳಿನ ಕಾರ್ಯಕ್ರಮ ಕುತೂಹಲ ಮೂಡಿಸಿದೆ.