ನವದೆಹಲಿ: 2002ರಲ್ಲಿ ದೆಹಲಿ ಮೂಲದ ಉದ್ಯಮಿಯೊಬ್ಬರಿಗೆ 5 ಕೋಟಿ ರುಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದ ಪಾತಕಿ ಅಬು ಸಲೇಂ ದೆಹಲಿ ಕೋರ್ಟ್ ಗುರುವಾರ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ ನ್ಯಾಯಾಧೀಶ ತರುಣ್ ಸೆಹ್ರಾವತ್ ಅವರು, ಸುಲಿಗೆ ಪ್ರಕರಣದಲ್ಲಿ ಅಬು ಸಲೇಂ ಅಪರಾಧಿ ಎಂದು ಮೇ 26ರಂದು ತೀರ್ಪು ನೀಡಿದ್ದರು. ಇಂದು ಅಪರಾಧಿಗೆ ಶಿಕ್ಷೆಯ ಪ್ರಮಾಣ ಪ್ರಕಟಿಸಿದ್ದಾರೆ.
ದಕ್ಷಿಣ ದೆಹಲಿಯ ಗ್ರೇಟರ್ ಕೈಲಾಶ್ ನಿವಾಸಿ, ಉದ್ಯಮಿ ಅಶೋಕ್ ಗುಪ್ತಾ ಅವರು ಅಬು ಸಲೇಂ ವಿರುದ್ಧ 2002ರಲ್ಲಿ ಪ್ರಕರಣ ದಾಖಲಿಸಿದ್ದರು.