ಕಾಂಗ್ರೆಸ್ ಕಾರ್ಯಕರ್ತರೂ ನಮ್ಮೊಂದಿಗೆ ಕೆಲಸ ಮಾಡಿದ್ದಾರೆ, ಆರ್ ಎಸ್ಎಸ್ ಸೀಮಿತ ಸಂಘಟನೆಯಲ್ಲ: ಮೋಹನ್ ಭಾಗ್ವತ್

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ಎಸ್) ಸಮಾಜದ ಎಲ್ಲ ವರ್ಗದವರನ್ನೂ ಜೊತೆಗೂಡಿಸಲು ಇರುವ ಸಂಘಟನೆಯಾಗಿದ್ದು ಯಾವುದೇ ಒಂದು ವರ್ಗ, ಸಮಾಜಕ್ಕೆ ಸೀಮಿತವಾದ ಸಂಘಟನೆಯಲ್ಲ
ಮೋಹನ್ ಭಾಗ್ವತ್
ಮೋಹನ್ ಭಾಗ್ವತ್
ನಾಗ್ಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ಎಸ್) ಸಮಾಜದ ಎಲ್ಲ ವರ್ಗದವರನ್ನೂ ಜೊತೆಗೂಡಿಸಲು ಇರುವ ಸಂಘಟನೆಯಾಗಿದ್ದು ಯಾವುದೇ ಒಂದು ವರ್ಗ, ಸಮಾಜಕ್ಕೆ ಸೀಮಿತವಾದ ಸಂಘಟನೆಯಲ್ಲ ಎಂದು ಆರ್ ಎಸ್ಎಸ್ ನ ಸರಸಂಘಚಾಲಕ ಮೋಹನ್ ಭಾಗ್ವತ್ ಹೇಳಿದ್ದಾರೆ. 
ನಾಗ್ಪುರದಲ್ಲಿ ನಡೆಯುತ್ತಿರುವ ಸಂಘ ಶಿಕ್ಷಾ ವರ್ಗ  ಕಾರ್ಯಕ್ರಮವನ್ನುದ್ದೇಶಿಸಿ ಭಾಷಣ ಮಾಡಿರುವ ಮಾಡಿರುವ ಮೋಹನ್ ಭಾಗ್ವತ್ ಸಮಾಜದ ಆರ್ ಎಸ್ಎಸ್ ದೇಶಕ್ಕಾಗಿ ಸೇವೆ ಸಲ್ಲಿಸಲು ಇರುವ ಸಂಘಟನೆಯಾಗಿದ್ದು ತನ್ನ ನಡವಳಿಕೆಯಿಂದಲೇ ಉದಾಹರಣೆ ನೀಡುವ ಸಂಘಟನೆಯಾಗಿದೆ ಎಂದು ಹೇಳಿದ್ದಾರೆ. 
ಇದೇ ವೇಳೆ ಪ್ರಣಬ್ ಮುಖರ್ಜಿ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ವ್ಯಕ್ತವಾಗುತ್ತಿರುವ ಟೀಕೆಗಳಿಗೂ ಉತ್ತರ ನೀಡಿರುವ ಮೋಹನ್ ಭಾಗ್ವತ್ ಸಂಘದ ಸಂಸ್ಥಾಪಕರಾದ ಹೆಡಗೆವಾರರೂ ಕಾಂಗ್ರೆಸ್ಸಿಗಾರಾಗಿಯೇ ಜೈಲಿಗೆ ಹೋಗಿದ್ದವರು, ಕಾಂಗ್ರೆಸ್ ಕಾರ್ಯಕರ್ತರೂ ನಮ್ಮೊಂದಿಗೆ ಕೆಲಸ ಮಾಡಿದ್ದಾರೆ. 
ಭಾರತೀಯರೆಲ್ಲರೂ ಒಂದೇ ಪೂರ್ವಜರ ಪರಂಪರೆ  ಹೊಂದಿದ್ದಾರೆ. ಪ್ರತಿ ಭಾರತೀಯನೂ ಮಾತೃಭೂಮಿಯನ್ನು ಪೂಜಿಸುತ್ತಾನೆ, ಸಂಘದಲ್ಲಿ ಪ್ರಜಾಪ್ರಭುತ್ವದ ಮನಸ್ಥಿತಿ ಇರುವುದರಿಂದಲೇ ಆರ್ ಎಸ್ ಎಸ್ ಅಸ್ಥಿತ್ವದಲ್ಲಿದೆ ಎಂದು ಮೋಹನ್ ಭಾಗ್ವತ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com