ರಾಷ್ಟ್ರೀಯತೆಯೇ ಎಲ್ಲಕ್ಕಿಂತ ಮಿಗಿಲು, ರಾಷ್ಟ್ರೀಯವಾದ ಧರ್ಮ, ಜನಾಂಗಕ್ಕೆ ಸೀಮಿತ ಅಲ್ಲ: ಆರ್ ಎಸ್ಎಸ್ ಕಾರ್ಯಕ್ರಮದಲ್ಲಿ ಪ್ರಣಬ್ ಮುಖರ್ಜಿ

ರಾಷ್ಟ್ರೀಯತೆ ಎಲ್ಲಕ್ಕಿಂತ ಮಿಗಿಲಾದದ್ದು, ರಾಷ್ಟ್ರೀಯವಾದ ಧರ್ಮ, ಜನಾಂಗಕ್ಕೆ ಸೀಮಿತ ಅಲ್ಲ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಪ್ರಣಬ್ ಮುಖರ್ಜಿ
ಪ್ರಣಬ್ ಮುಖರ್ಜಿ
ನಾಗ್ಪುರ: ರಾಷ್ಟ್ರೀಯತೆ ಎಲ್ಲಕ್ಕಿಂತ ಮಿಗಿಲಾದದ್ದು, ರಾಷ್ಟ್ರೀಯವಾದ ಧರ್ಮ, ಜನಾಂಗಕ್ಕೆ ಸೀಮಿತ ಅಲ್ಲ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ. 
ಜೂ.07 ರಂದು ನಾಗ್ಪುರದಲ್ಲಿ ಆರ್ ಎಸ್ಎಸ್ ನ ಸಂಘ ಶಿಕ್ಷಾ ವರ್ಗ  ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾರತ ಅತ್ಯುತ್ತಮ, ಸಮರ್ಥ ಆಡಳಿತ ಹೊಂದಿದೆ ಎಂದು 7 ನೇ ಶತಮಾನದಲ್ಲೇ ವಿದೇಶದ ವಿದ್ವಾಂಸರು ನಮ್ಮ ದೇಶವನ್ನು ಕೊಂಡಾಡಿದ್ದರು.  ನಮ್ಮ ದೇಶಕ್ಕೆ 5 ಸಾವಿರ ವರ್ಷಗಳ ಸಾಂಸ್ಕೃತಿಕ ಅಡಿಪಾಯ ಭದ್ರವಾಗಿದೆ. ಸಂಸ್ಕೃತಿಯ ಏಕತೆ, ಮೂಲಭೂತ ಐಕ್ಯತೆ ನಮ್ಮ ಮಂತ್ರ, ಜಾತ್ಯಾತೀತತೆ ನನಗೆ ನಂಬಿಕೆಯ ಪ್ರಶ್ನೆಯಾಗಿದ್ದು ರಾಷ್ಟ್ರೀಯತೆಗೆ ಹೆಚ್ಚು ಒತ್ತು ನೀಡಬೇಕಿದೆ ಎಂದು ಮಾಜಿ ರಾಷ್ಟ್ರಪತಿಗಳು ಕರೆ ನೀಡಿದ್ದಾರೆ. 
ದ್ವೇಷದ ಭಾವನೆ ನಮ್ಮ ರಾಷ್ಟ್ರೀಯತೆಗೆ ಅಪಾಯಕಾರಿ, ನಮ್ಮ ದೇಶದ ವಿಚಾರಧಾರೆಗಾನ್ನು ಹಿಂಸಾಚಾರವಿಲ್ಲದೇ ಹಂಚಿಕೊಳ್ಳಬೇಕಾಗಿದೆ, ರಾಷ್ಟ್ರೀಯತೆಯೇ ಎಲ್ಲಕ್ಕಿಂತ ಮಿಗಿಲು, ರಾಷ್ಟ್ರೀಯವಾದ ಧರ್ಮ, ಜನಾಂಗಕ್ಕೆ ಸೀಮಿತ ಅಲ್ಲಎಂದು ಪ್ರಣಬ್ ಮುಖರ್ಜಿ ಹೇಳಿದ್ದು, ಸಂಘ ಶಿಕ್ಷಾ ವರ್ಗಾ ಮುಕ್ತಾಯಗೊಳಿಸಿರುವ ಕಾರ್ಯಕರ್ತರು ಶಾಂತಿ, ಸಹಬಾಳ್ವೆ, ಸೌಹಾರ್ದತೆಯನ್ನು ಪ್ರಚಾರ ಮಾಡಬೇಕಿದೆ ಎಂದು ಕರೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com